ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಹತ್ತಿಕೊಂಡ ಬೆಂಕಿಗೆ ಹಸು ಸಜೀವ ದಹನ

ದಿಗಂತ ವರದಿ ಮೈಸೂರು:

ವಿದ್ಯುತ್ ಶಾರ್ಟ್ ಸರ್ಕೂ್ಯಟ್ ನಿಂದಾಗಿ ಹತ್ತಿಕೊಂಡ ಬೆಂಕಿಗೆ ಹಸುವೊಂದು ಸಜೀವವಾಗಿ ದಹನವಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಲಕ್ಷ÷್ಮಮ್ಮ ಎಂಬುವರಿಗೆ ಸೇರಿದ ಜಮೀನಿನಲ್ಲಿದ್ದ ಕೊಟ್ಟಿಗೆಯಲ್ಲಿ ಶಾರ್ಟ್ ಸರ್ಕೂ್ಯಟ್ ನಿಂದ ಹತ್ತಿಕೊಂಡ ಬೆಂಕಿ ಇಡೀ ಕೊಟ್ಟಿಗೆಯನ್ನು ಆವರಿಸಿದೆ. ಹಸುವನ್ನು ಕಟ್ಟಿ ಹಾಕಿದ್ದರಿಂದ, ಅದು ಬೆಂಕಿಯಿAದ ಪಾರಾಗಲು ಅವಕಾಶವಿಲ್ಲದೆ, ಚೀರಾಡುತ್ತಲೇ ಸಜೀವವಾಗಿ ದಹನವಾಗಿದೆ. ಅಲ್ಲದೇ
ಕೊಟ್ಟಿಗೆಯಲ್ಲಿದ್ದ ಇಟ್ಟಿದ್ದ 12 ಕ್ವಿಂಟಾಲ್ ಭತ್ತ, 250 ತೆಂಗಿನ ಕಾಯಿಗಳು ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಬೆಂಕಿಯನ್ನು ಅಕ್ಕ ಪಕ್ಕದವರು, ಮನೆಯ ನಿವಾಸಿಗಳು ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು. ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss