spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೆಹಲಿಯಲ್ಲಿ ರಸ್ತೆ ಮಧ್ಯೆಯೇ ಬಾಯ್ತೆರೆದ ಗುಂಡಿ: ಗಾಬರಿಗೊಂಡ ಜನತೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೆಹಲಿಯ ಹಾಜ್ ಕಾಸ್​ ಬಳಿ ರಸ್ತೆಯೊಂದರಲ್ಲಿ ದೈತ್ಯಾಕಾರದ ಗುಂಡಿಯೊಂದು ನಿರ್ಮಾಣವಾಗಿದೆ. ಇಂದು ಬೆಳಗ್ಗೆ 09:30-10:00 ಗಂಟೆ ಸುಮಾರಿಗೆ ಸಾರ್ವಜನಿಕರು ಬೃಹತ್ ಗುಂಡಿಯೊಂದು ರಸ್ತೆ ಮಧ್ಯೆಯೇ ತೆರೆದುಕೊಂಡಿರೋದನ್ನ ಕಂಡು ಗಾಬರಿಬಿದ್ದಿದ್ದಾರೆ.
ಈ ವೇಳೆ ತಕ್ಷಣವೇ ಗುಂಡಿಯ ಸುತ್ತ ಬ್ಯಾರಿಕೇಡ್​​ಗಳನ್ನ ಜೋಡಿಸಲಾಗಿ ಸಂಭವಿಸಬಹುದಾದ ದುರಂತವೊಂದು ತಪ್ಪಿದೆ.
ದೆಹಲಿ ಜಲ್ ಬೋರ್ಡ್​ಗೆ ಸಂಪರ್ಕಿಸುವ ಕಾಲುವೆಯೊಂದು ಈ ಮಾರ್ಗವಾಗಿ ಹಾದುಹೋಗಿರುವ ಪರಿಣಾಮ ರಸ್ತೆಯ ಮಧ್ಯೆ ಗುಂಡಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಗುಂಡಿ ನಿರ್ಮಾಣವಾಗಿರುವುದರ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ.. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss