Wednesday, June 29, 2022

Latest Posts

ರಾಜಕಾರಣಿಗೆ ಶಾಸಕನಾದೆ ಎನ್ನುವ ಹೆಮ್ಮೆ ಇರಬೇಕು, ಸೊಕ್ಕು ಇರಬಾರದು: ಮಾಜಿ ಸಚಿವ ಪಟ್ಟಣಶೆಟ್ಟಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ವಿಜಯಪುರ:

ರಾಜಕಾರಣಿಗೆ ಶಾಸಕನಾದೆ ಎನ್ನುವ ಹೆಮ್ಮೆ ಇರಬೇಕು, ಆದರೆ ಸೊಕ್ಕು ಇರಬಾರದು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀವು ಎಷ್ಟು ಸಾರಿ ಗೆದ್ದಿದ್ದೀರಿ, ಸೋತಿದ್ದೀರಿ ಎನ್ನುವುದು ನಮಗೂ ಗೊತ್ತಿದೆ. ಇಡೀ ಕಲಿಯುಗದಲ್ಲಿ ಸತ್ಯ ಹರಿಶ್ಚಂದ್ರ ಎನ್ನುವವರು ಇದ್ದರೆ ಅದು ಅವರೇ ವಿಜಯಪುರ ನಗರ ಶಾಸಕ ಎಂದರು.
ಯಾರೂ ಯಾರನ್ನು ಸೋಲಿಸಲು ಆಗುವುದಿಲ್ಲ, ಜನರಿಂದ ಮಾತ್ರ ರಾಜಕಾರಣಿಗಳನ್ನು ಗೆಲ್ಲಿಸಲು, ಸೋಲಿಸಲು ಸಾಧ್ಯ ಎಂದು.
ಸರ್ಕಾರ ಅನುಮತಿ ನೀಡಿದರು ಅಷ್ಟೇ, ನೀಡದಿದ್ದರು ಅಷ್ಟೇ ನಾವು ಗಜಾನನ ಉತ್ಸವವನ್ನು ಮಾಡಿಯೇ ಮಾಡುತ್ತೇವೆ.
ಸರ್ಕಾರ ಕೂಡಲೇ ಕೆಲವು ನಿಬಂಧನೆಗಳನ್ನು ವಿಧಿಸಿ, ಗಜಾನನ ಉತ್ಸವಕ್ಕೆ ಅನುಮತಿ ನೀಡಬೇಕು ಎಂದರು.
ಇದೊಂದು ಹಿಂದೂಗಳ ಪವಿತ್ರ ಹಬ್ಬ ಹಾಗೂ ಯುವಕರನ್ನು ಒಗ್ಗೂಡಿಸುವ ಹಬ್ಬವಾಗಿರುವ ಗಜಾನನ ಉತ್ಸವ ಸರ್ಕಾರಕ್ಕೆ ಹೆದರಿಸಿ, ಬೆದರಿಸಿ ಅನುಮತಿ ಪಡೆಯುವುದಿಲ್ಲ, ನಾವು ಶಾಂತ ರೀತಿಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಗರ ಶಾಸಕರು ಮಾತ್ರ ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಅವರಿಗೆ ಈ ಉತ್ಸವ ನೆನಪಾಗಿದೆ. ಪ್ರತಿ ಉತ್ಸವದಲ್ಲಿ ನಮ್ಮ ಸ್ವಾರ್ಥವನ್ನು ಬಯಸಬಾರದು, ನಮ್ಮಿಂದ ಯುವಕರು ದಾರಿ ತಪ್ಪುವಂತಾಗಬಾರದು ಎಂದು ತಿಳಿಸಿದರು.
ಮುಖಂಡರಾದ ಶಿವಾನಂದ ಮಾನಕರ, ಪ್ರಭಾಕರ ಭೋಸಲೆ, ವಿಜಯಕುಮಾರ ಕೋವಳ್ಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss