ಫಹದ್ ಅನ್ನು ಮದುವೆಯಾಗುವ ಮುನ್ನ ಫ್ರಿಡ್ಜ್ ನೋಡಬೇಕಿತ್ತು: ನಟಿ ಸ್ವರಾ ಭಾಸ್ಕರ್ ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಮಾಜವಾದಿ ಪಕ್ಷ ಮುಸ್ಲಿಂ ನಾಯಕ ಫಹದ್ ಅಹ್ಮದ್‌ನನ್ನು ಮದ್ವೆಯಾದ ನಟಿ ಸ್ವರಾ ಭಾಸ್ಕರ್ ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹತ್ಯೆಯಾಗಬಹುದು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ.

ಸ್ವರಾ ಭಾಸ್ಕರ್ ಯಾವಾಗಲೂ ಹಿಂದು ಧರ್ಮದ (Hindu religion) ವಿರುದ್ಧವೇ ಮಾತನಾಡುತ್ತಿದ್ದಳು. ಅವಳು ಹಿಂದು ಧರ್ಮದವರಲ್ಲದವರನ್ನು ಮದುವೆಯಾಗುತ್ತಾಳೆ ಎಂಬುದು ನನಗೆ ಖಚಿತವಾಗಿತ್ತು. ಅದರಂತೆ ಈಗ ನಡೆದಿದೆ. ಆಕೆ ಮುಸಲ್ಮಾನನನ್ನು ಮದುವೆಯಾಗಿದ್ದಾಳೆ ಎಂದು ಸಾಧ್ವಿ ಪ್ರಾಚಿ ಹೇಳಿದರು.

ಫೆಬ್ರವರಿ 16 ರಂದು ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ರಾಜಕಾರಣಿ ಫಹಾದ್ ಅಹ್ಮದ್ ಅವರೊಂದಿಗೆ ಮದುವೆ ಮಾಡಿಕೊಂಡಿದ್ದಾರೆ. ಸ್ವರಾ ಇಸ್ಲಾಂ ಧರ್ಮವನ್ನು ಸ್ವೀಕರಿಸದೇ ಫಹಾದ್ ಅವರನ್ನು ವಿವಾಹವಾಗಿದ್ದರು. ಹೀಗಾಗಿ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರು ಷರಿಯಾ ಕಾನೂನುಗಳ ಅಡಿಯಲ್ಲಿ ಈ ಮದುವೆಯ ಸಿಂಧುತ್ವವನ್ನು ಪ್ರಶ್ನಿಸುವುದರೊಂದಿಗೆ ಈ ವಿಚಾರವೂ ಸಾಮಾಜಿಕ ಮಾಧ್ಯಮದಲ್ಲಿ (Social Media) ಭಾರೀ ಚರ್ಚೆಯನ್ನು ಉಂಟು ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!