ಕೆಲವರ ಬ್ರಶ್ ನೋಡಿದ್ದೀರಾ? ಹಣ್ಣು ಹಣ್ಣು ಮುದುಕಿಯ ಹಾಗೆ ಇರುತ್ತದೆ. ಅದನ್ನು ನಾವೇ ಎಸೆದುಬಿಡಬೇಕು. ಇಲ್ಲವಾದರೆ ಅದರ ಬ್ರಿಸೆಲ್ಸ್ ಎಲ್ಲ ಅದಾಗೇ ಉದುರಿ ಹೋಗುವವರೆಗೂ ನಾವದನ್ನು ಬದಲಾಯಿಸೋದಿಲ್ಲ. ಆದರೆ ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಬೇಕು ಅಂತಾರೆ. ಅದು ನಿಜನಾ?
ಹೌದು, ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಲೇಬೇಕು. ನಿಮ್ಮ ಬಾಯಿಯ ಬ್ಯಾಕ್ಟೀರಿಯಾವನ್ನು ಬ್ರಶ್ ತೆಗೆದು ಹಾಕಬೇಕು. ಅದನ್ನು ಬಿಟ್ಟು ಬ್ಯಾಕ್ಟೀರಿಯಾ ಬೆಳೆಯೋಕೆ ನಿಮ್ಮ ಬ್ರಶ್ ಜಾಗ ಆಗಬಾರದು. ಮೆತ್ತಗಾದ ಬ್ರಿಸೆಲ್ಸ್ನಲ್ಲಿ ಬ್ಯಾಕ್ಟೀರಿಯಾ ಹೆಚ್ಚು ಬೆಳವಣಿಗೆ ಹೊಂದುತ್ತದೆ.