ಮನೆಯಲ್ಲಿ ಅಜ್ಜ-ಅಜ್ಜಿ ಇದ್ದರೆ ಮಡಿ ಮೈಲಿಗೆ ಇದೆಲ್ಲಾ ತೀರಾ ಸಾಮಾನ್ಯ. ಅದರಲ್ಲೂ ಹೆಣ್ಣುಮಕ್ಕಳ ವಿಷಯದಲ್ಲಿ ಸ್ವಲ್ಪ ರೂಲ್ಸ್ ಹೆಚ್ಚೇ ಇರುತ್ತದೆ. ಹೆಣ್ಣುಮಕ್ಕಳ ಪಿರಿಯಡ್ಸ್ ಆರಂಭವಾದ ತಕ್ಷಣ ಎಲ್ಲಿದ್ದರೂ, ಹೇಗಿದ್ದರೂ ಮೊದಲು ಸ್ನಾನ ಮಾಡಿ ಎಂದು ಬಾತ್ರೂಂಗೆ ಅಟ್ಟುತ್ತಾರೆ. ತಲೆ ಸ್ನಾನ ಮಾಡಲೇಬೇಕು ಎಂದು ಅಜ್ಜಿ ಕೂಗಿದರೆ, ತಲೆ ಸ್ನಾನ ಬೇಡ ಬರೀ ಸ್ನಾನ ಸಾಕು ಎಂದು ಅಮ್ಮ ಕೂಗುತ್ತಾರೆ.
ಪಿರಿಯಡ್ಸ್ ಆದ ತಕ್ಷಣ ತಲೆಸ್ನಾನ ಮಾಡಬೇಕಾ? ಅಥವಾ ಬೇಡವಾ? ಉತ್ತರ ಇಲ್ಲಿದೆ..
ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ನೀಳವಾದ ಕೂದಲು ಇರುತ್ತಿತ್ತು. ಆಗೆಲ್ಲಾ ಈಗಿನ ರೀತಿ ಬಾತ್ರೂಂ ಸೌಲಭ್ಯ ಇರಲಿಲ್ಲ. ಬೆಳಗಿನ ಜಾವವೇ ಕೆರೆಗಳಿಗೆ ತೆರಳಿ ಸ್ನಾನ ಮಾಡಿಕೊಂಡು ಬರುತ್ತಿದ್ದರು. ಆದರೆ ಪಿರಿಯಡ್ಸ್ ಸಮಯದಲ್ಲಿ ತಲೆ ಸ್ನಾನ ಮಾಡಲು ತುಂಬಾ ಸಮಯ ಬೇಕಿತ್ತು. ಸಮಯ ಹೆಚ್ಚಾದಷ್ಟು ಬೆಳಕು ಹರಿಯುತ್ತಿತ್ತು. ಹಾಗಾಗಿ ತಲೆಸ್ನಾನ ಬೇಡ ಎಂದಿರಬಹುದು.
ಇನ್ನು ಸೈಂಟಿಫಿಕ್ ಆಗಿ ತಲೆಸ್ನಾನ ಯಾಕೆ ಮಾಡಬಾರದು ಗೊತ್ತಾ? ಈ ಸಮಯದಲ್ಲಿ ದೇಹದಲ್ಲಿ ಉಷ್ಣತೆ ಹೆಚ್ಚಿರುತ್ತದೆ. ಯೂಟರಸ್ನಲ್ಲಿರುವ ವೇಸ್ಟ್ ಹೊರಬರಲು ಹೀಟ್ ಸಹಕಾರಿ. ಆದರೆ ತಲೆ ಸ್ನಾನ ಮಾಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಹಾಗಾಗಿ ಎಷ್ಟೋ ವೇಸ್ಟ್ ಯುಟೆರಸ್ನಲ್ಲಿಯೇ ಉಳಿದುಬಿಡಬಹುದು! ಇದರಿಂದ ಇನ್ಫೆಕ್ಷನ್, ಹಾರ್ಮೋನ್ ಇಂಬ್ಯಾಲೆನ್ಸ್ ಕೂಡ ಆಗಬಹುದು.