FACT | ತಾಂಬೂಲ ತಿಂದ ಬಳಿಕ ಒಂದು ಗಂಟೆ ಯಾವೆಲ್ಲಾ ಆಹಾರ ಸೇವಿಸಬಾರದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಂಬೂಲದಲ್ಲಿ ಬಳಸುವ ವೀಳ್ಯದೆಲೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಲೆಯಲ್ಲಿ ಸುಣ್ಣದ ಜೊತೆಗೆ ಜಾಯಿಕಾಯಿ, ಹಸಿರು ಕರ್ಪೂರ, ಕುಂಕುಮ ಹೂವು, ಏಲಕ್ಕಿ ಪುಡಿ, ಕಸ್ತೂರಿ ಇತ್ಯಾದಿಗಳನ್ನು ಬಳಸುತ್ತಾರೆ. ಇವೆಲ್ಲವೂ ಆಯುರ್ವೇದದ ಪ್ರಕಾರ ಆರೋಗ್ಯಕ್ಕೆ ಪ್ರಯೋಜನಕಾರಿ. ಭಾರತೀಯರು ಊಟದ ನಂತರ ತಾಂಬೂಲವನ್ನು ಅಗಿಯುತ್ತಾರೆ. ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಪೂರ್ಣಾಹಾರದ ನಂತರ ತಾಂಬೂಲವನ್ನು ಸೇವಿಸಲಾಗುತ್ತದೆ.

ಹೊಟ್ಟೆ ಮತ್ತು ಕರುಳಿನಲ್ಲಿ ಪಿಹೆಚ್ ಅಸಮತೋಲನವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ತಾಂಬೂಲ ಸೇವಿಸಿ ತಿನ್ನಬಾರದ ಕೆಲವು ಆಹಾರ ಪದಾರ್ಥಗಳ ಬಗ್ಗೆ ಅನೇಕರಿಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ. ತಾಂಬೂಲವನ್ನು ಸೇವಿಸಿದ ನಂತರ ಕೆಲವು ಆಹಾರಗಳನ್ನು ಸೇವಿಸಬಾರದು.

  • ತಾಂಬೂಲವನ್ನು ತೆಗೆದುಕೊಂಡ ನಂತರ ಒಂದು ಗಂಟೆ ಹಾಲು ಕುಡಿಯಬಾರದು
  • ಮದ್ಯಪಾನ ಮಾಡುವುದು ಹಲ್ಲಿನ ಸಮಸ್ಯೆಗಳನ್ನು ಉಂಟುಮಾಡಬಹುದು.
  • ಮಸಾಲೆಗಳೊಂದಿಗೆ ಬೇಯಿಸಿದ ಆಹಾರವನ್ನು ಸೇವಿಸಿದ ನಂತರ ತಿನ್ನಬಾರದು.
  • ತಾಂಬೂಲ ತಿಂದ ನಂತರ ತಣ್ಣೀರು ಕುಡಿಯುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ
  • ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ತಾಂಬೂಲ ಸೇವಿಸಿದ ನಂತರ ಯಾವುದೇ ಔಷಧ ಸೇವಿಸಬಾರದು
  • ಸೇವಿಸಿದರೆ ತಲೆನೋವು, ಹೊಟ್ಟೆನೋವಿನಂತಹ ಆರೋಗ್ಯ ಸಮಸ್ಯೆಗಳು ಬರಬಹುದು

ವೀಳ್ಯದೆಲೆಯನ್ನು ಮಿತವಾಗಿ ಸೇವಿಸಿದರೆ ಔಷಧ, ಅತಿಯಾಗಿ ಸೇವಿಸಿದರೆ ವಿಷ ಎಂದು ತಜ್ಞರು ಎಚ್ಚರಿಸುತ್ತಾರೆ. ವೀಳ್ಯದೆಲೆಯ ಮೇಲೆ ಸುಣ್ಣ ಬಲಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!