ಮುಂಬೈಯಲ್ಲಿ ಅಫ್ತಾಬ್ ವಿರುದ್ಧ ಶ್ರದ್ಧಾ ದೂರು: ಪೊಲೀಸರ ಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಡಿಸಿಎಂ ಫಡ್ನವೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ನವೆಂಬರ್ 2020 ರಲ್ಲಿ ಅಫ್ತಾಬ್ ವಿರುದ್ಧ ಶ್ರದ್ಧಾ ನೀಡಿದ ದೂರಿನ ಬಗ್ಗೆ ಪೊಲೀಸರ ಕ್ರಮದ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಪ್ರಸ್ತಾಪಿಸಲಾಗಿದೆ.ಈ ವೇಳೆ 2020 ರಲ್ಲಿ, ಅಫ್ತಾಬ್ ವಿರುದ್ಧ ಶ್ರದ್ಧಾ ವಾಕರ್‌ ಮಹಾರಾಷ್ಟ್ರದ ಪಾಲ್ಘರ್‌ನ ತುಳಿಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ತನ್ನನ್ನು ಕೊಲ್ಲುವುದಾಗಿ ಮತ್ತು ತುಂಡುಗಳಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಿದ್ದರು.

ಈ ಪತ್ರ ಬೆಳಕಿಗೆ ಬಂದ ನಂತರ, ಶ್ರದ್ಧಾ ನಂತರ ತನ್ನ ದೂರನ್ನು ವಾಪಸ್ ಪಡೆದಿದ್ದರು ಎಂದು MBVV ಕಮಿಷನರೇಟ್‌ನ ಡಿಸಿಪಿ ಸುಹಾಸ್ ಬಾವಾಚೆ ಹೇಳಿದ್ದರು. ಈ ದೂರಿನ ಪತ್ರದ ಕುರಿತು ಮಾತನಾಡಿದ ದೇವೇಂದ್ರ ಫಡ್ನವೀಸ್, “ಇದುವರೆಗೆ ಶ್ರದ್ಧಾ ಮೇಲೆ ದೂರು ಹಿಂಪಡೆಯಲು ರಾಜಕೀಯ ಒತ್ತಡ ಇರಲಿಲ್ಲ ಎಂದು ತಿಳಿದುಬಂದಿದೆ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ದೂರು ದಾಖಲಿಸುವ ಮತ್ತು ಹಿಂತೆಗೆದುಕೊಳ್ಳುವ ನಡುವೆ ಒಂದು ತಿಂಗಳ ಅಂತರವಿತ್ತು. ಆ ಸಮಯದಲ್ಲಿ ಪೊಲೀಸರು ಏನು ಕ್ರಮ ಕೈಗೊಂಡರು ಎಂಬುದನ್ನು ನಾವು ತನಿಖೆ ಮಾಡುತ್ತೇವೆ ಎಂದೂ ಫಡ್ನವೀಸ್ ಮಂಗಳವಾರ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!