ಶ್ರದ್ಧಾ ಕೊಲೆ ಪ್ರಕರಣ: ಮರಣೋತ್ತರ ಪರೀಕ್ಷೆಯ ಸ್ಫೋಟಕ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯ ಶ್ರದ್ಧಾವಾಲ್ಕರ್ ಕೊಲೆ ಪ್ರಕರಣದ ಹಲವು ಮಾಹಿತಿಗಳು ಹೊರಬರುತ್ತಿದ್ದು, ಆಕೆಯ ಪ್ರಿಯಕರ ಅಫ್ತಾಬ್ ಅನೇಕ ವಿಚಾರಗಳನ್ನು ಬಿಚ್ಚಿಡುತ್ತಿದ್ದಾನೆ

ಹಾಲಿ ಹೊರಬಿದ್ದಿರುವ ಮರಣೋತ್ತರ ಪರೀಕ್ಷೆಯಲ್ಲಿ ಅಫ್ತಾಬ್ ತನ್ನ ಪ್ರಿಯತಮೆಯ ದೇಹ ಕತ್ತರಿಸಲು ಗರಗಸ ಬಳಸಿದ್ದ ಎಂಬ ಅಘಾತಕಾರಿ ಅಂಶವನ್ನು ತಜ್ಞರು ಬಯಲು ಮಾಡಿದ್ದಾರೆ.

ದೆಹಲಿಯ ವಿವಿಧೆಡೆ ಸಂಗ್ರಹಿಸಿದ್ದ ಶ್ರದ್ಧಾ ವಾಲಕರ್ ಅವರ 23 ಮೂಳೆಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಏಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಗರಗಸ ಬಳಸಿ ತುಂಡರಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಜನವರಿ ಕೊನೆಯ ವಾರದಲ್ಲಿ ಪ್ರಕರಣ ಕುರಿತಂತೆ ಪೊಲೀಸರು ದೆಹಲಿಯ ಸಾಕೆತ್ ಕೋರ್ಟ್ಗೆ ದೋಷಾರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಶ್ರದ್ಧಾ ವಾಲಕರ್ ತಂದೆಯ ಡಿಎನ್ಎ ಜೊತೆ ದಕ್ಷಿಣ ದೆಹಲಿಯ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೂಳೆಗಳ ಡಿಎನ್ಎ ಹೊಂದಿಕೆಯಾದ ಹಿನ್ನೆಲೆಯಲ್ಲಿ ಮರಣೋತ್ತರ(ಮೂಳೆಗಳ ಪರೀಕ್ಷೆ) ನಡೆಸಲಾಯಿತು ಎಂದು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!