ಅಗತ್ಯವಿದ್ದರೆ ‘ಲವ್ ಜಿಹಾದ್’ ವಿರುದ್ಧ ಹೊಸ ಕಾನೂನು: ಶಿವರಾಜ್ ಸಿಂಗ್ ಚೌಹಾಣ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಗತ್ಯ ಬಿದ್ದರೆ ‘ಲವ್ ಜಿಹಾದ್’ ವಿರುದ್ಧ ಹೊಸ ಕಾನೂನು ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ  ಇತ್ತೀಚೆಗೆ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದರು.

ಈ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ‘ಲವ್ ಜಿಹಾದ್’ ತಡೆಯಲು ಪ್ರಯತ್ನಿಸಲಾಗುವುದು. “ರಾಜ್ಯದ ಯಾವುದೇ ಹೆಣ್ಣು ಮಗುವನ್ನು 35 ತುಂಡುಗಳಾಗಿ ಕತ್ತರಿಸಲು ನಾವು ಬಿಡುವುದಿಲ್ಲ. ‘ಲವ್ ಜಿಹಾದ್’ ವಿರುದ್ಧ ಹೊಸ ಕಾನೂನು ರೂಪಿಸುತ್ತೇವೆ. ಲವ್ ಜಿಹಾದ್‌ನಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಭೂಮಿಗಾಗಿ ಆದಿವಾಸಿ ಹೆಣ್ಣು ಮಕ್ಕಳ ವಿವಾಹವನ್ನೂ ತಡೆಯುತ್ತೇವೆ. ಇದು ಲವ್ ಅಲ್ಲ.. ಲವ್ ಹೆಸರಲ್ಲಿ ನಡೆಯುತ್ತಿರುವ ಜಿಹಾದ್. ಮಧ್ರಪ್ರದೇಶದ ನೆಲದಲ್ಲಿ ಇದನ್ನು ನಾವು ಯಾವುದೇ ಸಂದರ್ಭದಲ್ಲೂ ಒಪ್ಪುವುದಿಲ್ಲ,’’ ಎಂದು ಶಿವರಾಜ್ ಸಿಂಗ್ ಹೇಳಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ವಿಶೇಷ ಸಮಿತಿ ರಚಿಸಲಾಗುವುದು ಎಂದರು. ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ಸಲಹೆ ನೀಡಿದರು.

ಮಧ್ಯಪ್ರದೇಶ ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇದನ್ನು ಸಂವಿಧಾನದ 44 ನೇ ವಿಧಿಯ ಅಡಿಯಲ್ಲಿ ಅಳವಡಿಸಲಾಗಿದೆ. ಈ ಕಾನೂನಿನ ಪ್ರಕಾರ, ಜಾತಿ, ಧರ್ಮ, ಪ್ರದೇಶ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!