ಶ್ರದ್ಧಾ ಹತ್ಯೆ ಅಚಾನಕ್ಕಾಗಿ ನಡೆದ ಕೊಲೆ, ಹೊಸ ವಿಚಾರವಲ್ಲ: ರಾಜಸ್ಥಾನ ಸಿಎಂ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣ ತನಿಖೆ ನಾನಾ ಆಯಾಮವನ್ನು ಪಡೆಯುತ್ತಿದ್ದು, ಆರೋಪಿ ಅಫ್ತಾಬ್ ಕೃತ್ಯವನ್ನು ಒಪ್ಪಿದ್ದಾನೆ.

ಇದರ ನಡುವೆ ಹತ್ಯೆ ರಾಜಕೀಯದತ್ತ ವಾಲುತ್ತಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಘಟನೆ ಅಚಾನಕ್ಕಾಗಿ ನಡೆದಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಂತರ್ಜಾತಿಯ ವಿವಾಹ, ರಿಲೇಶನ್‌ಶಿಪ್ ಕುರಿತು ಸಮರ್ಥಿಸಿಕೊಳ್ಳಲು ಹೋದ ಕಾಂಗ್ರೆಸ್ ನಾಯಕ, ಶ್ರದ್ಧಾ ಹತ್ಯೆ ಅಚಾನಕ್ಕಾಗಿ ನಡೆದ ಕೊಲೆ. ಇದು ಹೊಸ ವಿಚಾರವಲ್ಲ. ಸಾಮಾನ್ಯವಾಗಿ ಹತ್ಯೆಗಳು ನಡೆಯುತ್ತಿರುತ್ತವೆ ಎಂದುನಾಲಿಗೆ ಹರಿಬಿಟ್ಟಿದ್ದಾರೆ.

ಭಾರತದಲ್ಲಿ ಅಂತರ್ಜಾತಿ ವಿವಾಹ ನಡೆಯುತ್ತಿದೆ. ಆದರೆ ಬಿಜೆಪಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ. ಅಂರ್ಜಾತಿ ವಿವಾಹ, ಅಂತರ್ಜಾತಿ ರಿಲೇಶನ್‌ಶಿಪ್‌ನ್ನು ಬಿಜೆಪಿ ಸಹಿಸಿಕೊಳ್ಳಲ್ಲ. ಹೀಗಾಗಿ ಬಿಜೆಪಿ ಒಂದು ಸಮುದಾಯವನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಿದ ಅಶೋಕ್ ಗೆಹ್ಲೋಟ್, ಶ್ರದ್ಧಾ ಹತ್ಯೆ ಅಚಾನಕ್ಕಾಗಿ ನಡೆದ ಘಟನೆ, ಇದರಲ್ಲೇನು ಹೊಸದಿಲ್ಲ. ಈ ರೀತಿಯ ಹತ್ಯೆಗಳು ಸಾಮಾನ್ಯ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಇದೀಗ ಗೆಹ್ಲೋಟ್ ಮಾತಿಗೆ ಬಿಜಿಪೆ ತಿರುಗೇಟು ನೀಡಿದೆ. ಬಿಜೆಪಿಯನ್ನು ವಿರೋಧಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಬಿಜೆಪಿಯನ್ನು ವಿರೋಧಿಸಲು ಉದ್ದೇಶಪೂರ್ವಕವಾಗಿ, ಸಂಚು ನಡೆಸಿ ಮಾಡಿರುವ ಭೀಕರ ಹತ್ಯೆಯನ್ನು ಆಕಸ್ಮಿಕವಾಗಿ ನಡೆದ ಕೊಲೆ ಎಂದು ಬಿಂಬಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!