Tuesday, June 28, 2022

Latest Posts

ಜಾಮೀನು ಸಿಕ್ಕರೂ ಶ್ರವಣ್, ನರೇಶ್​ಗೆ ತಪ್ಪಿಲ್ಲ ಬಂಧನದ ಭೀತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣದಲ್ಲಿ ಬ್ಲಾಕ್ ಮೇಲ್ ಆರೋಪ‌ಕ್ಕೆ ಸಂಬಂಧಿಸಿ ಜಾಮೀನು ಮೇರೆಗೆ ಬಿಡುಗಡೆ ಹೊಂದಿದ್ದ ಆರೋಪಿ ಶ್ರವಣ್, ನರೇಶ್​ಗೆ ಇದೀಗ ಮತ್ತೆ ಬಂಧನ ಭೀತಿ ಎದುರಾಗಿದೆ.
ಆರೋಪಿಗಳಿಗೆ ಕೋರ್ಟ್ ನೀಡಿರುವುದು ಷರತ್ತುಬದ್ಧ ನಿರೀಕ್ಷಣಾ ಜಾಮೀನಾಗಿದ್ದು, ಅಗತ್ಯ ಬಿದ್ದರೆ ಬಂಧಿಸಿ ವಿಚಾರಣೆಗೆ ಒಳಪಡಿಸಲು ತನಿಖಾಧಿಕಾರಿಗಳಿಗೆ ಕೋರ್ಟ್ ಅನುಮತಿ ನೀಡಿದೆ.
ವಿಚಾರಣೆಯಲ್ಲಿ ಬಂಧನ ಅತ್ಯಗತ್ಯವಾಗಿದ್ದರೆ ಬಂಧಿಸಬಹುದು, ಸೂಕ್ತ ಮಾಹಿತಿ ಆಧರಿಸಿ ವಸ್ತು, ದಾಖಲೆ ವಶಪಡಿಸಿಕೊಳ್ಳಬಹುದು ಎಂದು ಗೇಲುವ ಮೂಲಕ ಸೆಷನ್ಸ್ ಕೋರ್ಟ್​ ತನಿಖಾಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದೆ.
ಹೀಗಾಗಿ ನಿರೀಕ್ಷಣಾ ಜಾಮೀನು ಸಿಕ್ಕರೂ ಆರೋಪಿಗಳಿಗೆ ಬಂಧನ ಭೀತಿ ತಪ್ಪಿಲ್ಲ. ಇನ್ನು ಆರೋಪಿಗಳು ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. 5 ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಶರಣಾಗಬೇಕು, ಸಾಕ್ಷಿಗಳಿಗೆ ಬೆದರಿಕೆ, ಆಮಿಷ ಒಡ್ಡುವಂತಿಲ್ಲ. ತನಿಖಾಧಿಕಾರಿ ಕರೆದಾಗಲೆಲ್ಲ ವಿಚಾರಣೆಗೆ ಹಾಜರಾಗಬೇಕು. ಇಂಥದ್ದೇ ಬೇರೆ ಕೃತ್ಯಗಳಲ್ಲಿ ತೊಡಗುವಂತಿಲ್ಲ. ಯಾವುದೇ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದಾಗಲಿದೆ ಎಂದು ಸಿಸಿಹೆಚ್ 91 ರ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss