ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ಸಿಂಗರ್ ಶ್ರೇಯಾ ಘೋಷಾಲ್ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಅದರಲ್ಲಿ ಬರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಎಂದು ಶ್ರೇಯಾ ಮನವಿ ಮಾಡಿದ್ದಾರೆ.
ತಮ್ಮ ಇನ್ಸ್ಟಾ ಅಕೌಂಟ್ ಮೂಲಕ ಜನರಿಗೆ ಹ್ಯಾಕ್ ಬಗ್ಗೆ ತಿಳಿಸಿರುವ ಶ್ರೇಯಾ ಫೆ.13ರಿಂದಲೂ ನನ್ನ ಖಾತೆ ಹ್ಯಾಕ್ ಆಗಿಯೇ ಇದೆ. ನಾನು ಎಕ್ಸ್ ಟೀಂನ್ನು ಕಾಂಟಾಕ್ಟ್ ಮಾಡಲು ಎಲ್ಲ ರೀತಿ ಪ್ರಯತ್ನ ಮಾಡಿದ್ದೇನೆ. ಅವರಿಂದ ಯಾವ ರೆಸ್ಪಾನ್ಸ್ ಕೂಡ ಸಿಕ್ಕಿಲ್ಲ. ಒಂದೆರಡು ಆಟೋ ಜನರೇಟೆಡ್ ಮೆಸೇಜ್ ಬರುತ್ತಿದೆ. ನನ್ನ ಅಕೌಂಟ್ ಲಾಗಿನ್ ಆಗೋದಕ್ಕೆ ಆಗುತ್ತಿಲ್ಲ. ಹಾಗಾಗಿ ಖಾತೆಯನ್ನು ಡಿಲೀಟ್ ಕೂಡ ಮಾಡಲು ಆಗುವುದಿಲ್ಲ. ನನ್ನ ಖಾತೆಯಲ್ಲಿರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ. ಮೆಸೇಜ್‌ಗೆ ರಿಪ್ಲೇ ಮಾಡಬೇಡಿ. ಇದೆಲ್ಲ ದೊಡ್ಡ ಸ್ಕ್ಯಾಮ್ ಎಂದು ಶ್ರೇಯಾ ಹೇಳಿಕೊಂಡಿದ್ದಾರೆ.
ಎಕ್ಸ್ ಕಡೆಯಿಂದ ಸಹಾಯ ಸಿಕ್ಕು ನನ್ನ ಅಕೌಂಟ್ ನನಗೆ ವಾಪಾಸ್ ಸಿಕ್ಕರೆ ವಿಡಿಯೋ ಮೂಲಕ ನಿಮಗೆ ಮಾಹಿತಿ ನೀಡುತ್ತೇನೆ. ಅಲ್ಲಿಯವರೆಗೂ ಈ ಮೋಸದ ಜಾಲಕ್ಕೆ ಯಾರೂ ಸಿಕ್ಕಿಹಾಕಿಕೊಳ್ಳಬೇಡಿ ಎಂದಿದ್ದಾರೆ.
View this post on Instagram