ಟಿ20 ರ‍್ಯಾಂಕಿಂಗ್​ನಲ್ಲಿ ಜಿಗಿತ ಕಂಡ ಶ್ರೇಯಸ್​ ಅಯ್ಯರ್: ಟಾಪ್​ 10ರಲ್ಲಿ ರಾಹುಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ಬುಧವಾರ ಬಿಡುಗಡೆ ಮಾಡಿದ ನೂತನ ಟಿ20 ರ‍್ಯಾಂಕಿಂಗ್​ನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮವಾಗಿ ಆಡಿದ ಭಾರತ ತಂಡದ ಬ್ಯಾಟರ್ ಶ್ರೇಯಸ್​ ಅಯ್ಯರ್ ​27 ಸ್ಥಾನ ಜಿಗಿತ ಕಂಡಿದ್ದಾರೆ.
ಶ್ರೇಯಸ್​ ಅಯ್ಯರ್​ ಶ್ರೀಲಂಕಾ ವಿರುದ್ಧ ಅಜೇಯರಾಗಿ 57, 74 ಮತ್ತು 73 ರನ್​ಗಳಿಸಿ ಸರಣಿಯನ್ನು 3-0ಯಲ್ಲಿ ಗೆಲ್ಲುವುದಕ್ಕೆ ನೆರವಾಗಿದ್ದರು.
ವಿರಾಟ್ ಕೊಹ್ಲಿ ಅಗ್ರ 10 ಸ್ಥಾನಗಳಿಂದ ಹೊರಬಿದ್ದಿದ್ದು,15 ಸ್ಥಾನದಲ್ಲಿದ್ದಾರೆ. ಇನ್ನು ಕನ್ನಡಿಗ ಕೆ.ಎಲ್.ರಾಹುಲ್​ ಟಾಪ್​ 10 ರಲ್ಲಿರುವ ಏಕೈಕ ಬ್ಯಾಟ್ಸಮನ್ ಆಗಿದ್ದು, 10 ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 13ನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನದ ಆರಂಭಿಕರಾದ ಬಾಬರ್​ ಅಜಮ್ (805) ಮತ್ತು ಮೊಹಮ್ಮದ್​ ರಿಜ್ವಾನ್ ​(798) ಅಗ್ರ 2 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ​ ಭುವನೇಶ್ವರ್ ಕುಮಾರ್ 3 ಸ್ಥಾನ ಮೇಲೇರಿ 17ರಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!