ಶ್ರೇಯಸ್​ ಅಯ್ಯರ್​- ರಿಷಬ್​ ಪಂತ್ ಜೊತೆಯಾಟ: ವೆಸ್ಟ್​ ಇಂಡೀಸ್​ ಗೆಲುವಿಗೆ 266 ರನ್​ಗಳ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ (80) ಮತ್ತು ರಿಷಬ್​ ಪಂತ್​ (56) ರ ಹೋರಾಟದಿಂದ 265 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಭಾರತಕ್ಕೆ ಆರಂಭಿಕಾರದ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಶಿಖರ್ ಧವನ್​ರ ವಿಕೆಟ್​ ಕಳೆದುಕೊಂಡು ನಿರಾಸೆ ಮೂಡಿಸಿದರು.
ಈ ವೇಳೆ ಕ್ರೀಸ್​ಗಿಳಿದ ಶ್ರೇಯರ್​ ಅಯ್ಯರ್​ ಮತ್ತು ​ ರಿಷಬ್​ ಪಂತ್​ ಜವಾಬ್ದಾರಿಯುತ 110 ರನ್​ಗಳ ಜೊತೆಯಾಟವಾಡಿ ತಂಡ ಉತ್ತಮ ರನ್​ ಕಲೆಹಾಕುವಲ್ಲಿ ನೆರವಾದರು.
ಈ ವೇಳೆ ರಿಷಬ್​ ಪಂತ್​(56)ಗೆ ಜಾಸನ್​ ಹೋಲ್ಡರ್​ ಪೆವಿಲಿಯನ್​ ದಾರಿ ತೋರಿಸಿದರು. ಸೂರ್ಯಕುಮಾರ್​ ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ವಾಪಸ್ಸಾದರು.
ಸೂರ್ಯಕುಮಾರ್​ ಔಟಾದ ಬಳಿಕ ಮೈದಾನಕ್ಕಿಳಿದ ವಾಷಿಂಗ್ಟನ್​ ಸುಂದರ್​(33) ಶ್ರೇಯಸ್​ ಅಯ್ಯರ್​ಗೆ ಉತ್ತಮ ಸಾಥ್​ ನೀಡಿದರು. 80 ರನ್ ​ಗಳಿಸಿದ್ದಾಗ ಶ್ರೇಯಸ್​ ಅಯ್ಯರ್​ ಅರೆಕಾಲಿಕ ಬೌಲರ್​ ಡ್ಯಾರನ್​ ಬ್ರಾವೋ ಎಸೆತದಲ್ಲಿ ಔಟಾಗಿ ಶತಕದಿಂದ ವಂಚಿತರಾದರು. ಬಳಿಕ ಬಂದ ಬೌಲರ್​ ದೀಪಕ್​ ಚಹರ್​ 38 ಎಸೆತಗಳಲ್ಲಿ 4 ಬೌಂಡರಿ, 2 ಭರ್ಜರಿ ಸಿಕ್ಸರ್​ಗಳನ್ನು ಸಿಡಿಸಿ 38 ರನ್​ಗಳಿದರು. ದೀಪಕ್​ ಚಹರ್​ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶಾಯ್​ ಹೋಪ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಭಾರತ ತಂಡ ದಿಢೀರ್​ ಕುಸಿತಗೊಂಡು ತನ್ನೆಲ್ಲಾ ವಿಕೆಟ್​ ಒಪ್ಪಿಸಿ ವೆಸ್ಟ್​ ಇಂಡೀಸ್​ಗೆ 266 ರನ್​ಗಳ ಗುರಿ ನೀಡಿದೆ.
ವೆಸ್ಟ್​ ಇಂಡೀಸ್​ ಪರವಾಗಿ ಜಾಸನ್​ ಹೋಲ್ಡರ್​ 34/4 ವಿಕೆಟ್​ ಪಡೆದರೆ, ಅಲ್ಜಾರ್ರಿ ಜೋಶೆಫ್​ 2, ಹೈಡೆನ್​ ವಾಲ್ಶ್​ 2 ವಿಕೆಟ್​ ಕಿತ್ತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!