Sunday, August 14, 2022

Latest Posts

ರಾಜ್ಯ ಕ್ರಿಕೆಟ್ ತಂಡಕ್ಕೆ ಶ್ರೇಯಸ್ ಸಾಗರ್ ಆಯ್ಕೆ

ಹೊಸದಿಗಂತ ವರದಿ,ಶಿವಮೊಗ್ಗ:

ಪ್ರತಿಷ್ಠಿತ ವಿನೂ ಮಾಂಕಡ್ ಟ್ರೋಫಿ ಒಂದು ದಿನದ ಪಂದ್ಯಾವಳಿಯ 19 ವರ್ಷದೊಳಗಿನ (ಯು-19) ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಕೆಎಸ್‌ಸಿಎನ ಶಿವಮೊಗ್ಗ ಜೋನಲ್ ಆಟಗಾರ ಶ್ರೇಯಸ್ ಸಾಗರ್ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಶ್ರೇಯಸ್ ಸಾಗರ್ ಅವರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯುವರಂಗ ಕ್ರಿಕೆಟ್‌ಕ್ಲಬ್ ಪ್ರತಿನಿಧಿಸುತ್ತಿದ್ದಾರೆ. 10ನೇ ವಯಸ್ಸಿನಿಂದಲೇ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಶ್ರೇಯಸ್ ಸಾಗರ್ ಕ್ರಿಕೆಟ್‌ನಲ್ಲಿ ಹಂತ ಹಂತಕ್ಕೆ ಏರುವ ಮೂಲಕ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಶ್ರೇಯಸ್ ಮೂರು ವರ್ಷಗಳಿಂದ ಶಿವಮೊಗ್ಗ ಇಂಟರ್‌ಜೋನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.  ಇದೀಗ ರಾಜ್ಯದ 19 ವರ್ಷದೊಳಗಿನ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದಾರೆ.
ಇಂಟರ್‌ಜೋನ್ ಪಂದ್ಯಾವಳಿಗಳಲ್ಲಿ ಹಲವು ಶತಕಗಳನ್ನು ಬಾರಿಸಿರುವ ಶ್ರೇಯಸ್ ಸಾಗರ್ ಅವರು ಇತ್ತೀಚೆಗೆ ನಡೆದ 19 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಪಂದ್ಯಾವಳಿಗಳಲ್ಲಿಯೂ ಶತಕಗಳನ್ನು ಸಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಕ್ರಿಕೆಟ್ ತಂಡದಲ್ಲಿಯೂ ಉತ್ತಮ ಸಾಧನೆ ಮಾಡುವ ಭರವಸೆಯ ಆಟಗಾರ ಶ್ರೇಯಸ್ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss