ಹೊಸದಿಗಂತ ವರದಿ,ಅಂಕೋಲಾ:
ಗಣರಾಜ್ಯೋತ್ಸವ ಪರೇಡ್ ನಲ್ಲಿ ಕೇರಳದ ಶ್ರೀ ನಾರಾಯಣ ಗುರು ಅವರ ಸ್ಥಬ್ದಚಿತ್ರಕ್ಕೆ ಅವಕಾಶ ಮಾಡಿಕೊಡದಿರುವುದನ್ನು ಅಂಕೋಲಾ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವಿಭಾಗ ಖಂಡಿಸಿದ್ದು ಈ ಆದೇಶ ಪುನರ್ ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದೆ.
ಈ ಕುರಿತು ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಮತ್ತು ಜಿಲ್ಲಾ ಕಾರ್ಯದರ್ಶಿ ರಾಜು ಹರಿಕಾಂತ, ಕೇರಳದಲ್ಲಿ ಇಂದು ಹಿಂದೂ ಧರ್ಮ ಉಳಿದಿದ್ದರೆ ಇದಕ್ಕೆ ಶ್ರೀ ನಾರಾಯಣ ಗುರುಗಳ ಸಂಕಲ್ಪ ಕಾರಣ ಎಂದರು.
ಎಸ್.ಸಿ.ಎಸ್ಟಿ ಮೋರ್ಚಾ ಅಧ್ಯಕ್ಷ ಅಶೋಕ ಶೆಡಗೇರಿ, ಪ್ರಮುಖರಾದ ಗಣೇಶ ನಾಯ್ಕ, ನಾಗೇಂದ್ರ ನಾಯ್ಕ, ಸಂತೋಷ ನಾಯ್ಕ, ಇದ್ದರು.