ಮೊಸರಿಂದ ಸಿಹಿ ಅಡುಗೆ ತಯಾರಿಸುವುದು ಕಡಿಮೆ. ಹಾಗೊಂದು 10 ರೀತಿ ಅಡುಗೆ ಮಾಡಬಹುದು ಅಷ್ಟೇ. ಅವುಗಳಲ್ಲಿ ಶ್ರೀಖಂಡ ಬಹಳ ಸಿಂಪಲ್ ಆಗಿ ಬೇಗ ಮಾಡಬಹುದಾದ ರೆಸಿಪಿ. ಈ ರೆಸಿಪಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಹಳ ಇಷ್ಟಪಡುತ್ತಾರೆ. ದೋಸೆ ಜೊತೆಗೂ ತಿನ್ನಬಹುದು, ಹಾಗೆಯೂ ತಿನ್ನಬಹುದು.. ಇಲ್ಲಿದೆ ರೆಸಿಪಿ
ಬೇಕಾಗುವ ಸಾಮಗ್ರಿ:
ಮೊಸರು
ಸಕ್ಕರೆ
ಏಲಕ್ಕಿ
ಮಾಡುವ ವಿಧಾನ:
ಮೊದಲಿಗೆ ಮೊಸರನ್ನು ಒಂದು ಕಾಟನ್ ಬಟ್ಟೆಯಲ್ಲಿ ಕಟ್ಟಿ ಇಡಿ. ನೀರನ ಅಂಶವೆಲ್ಲ ಹೋಗಿ ಮೊಸರಿನ ಗಟ್ಟಿ ಅಂಶ ಮಾತ್ರ ಇರಬೇಕು.
ನಂತರ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿದರೆ ಶ್ರೀಖಂಡ ರೆಡಿ.