ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಧಾನಸಭೇಯ ಅಧಿವೇಶನದಲ್ಲಿ “ಒಂದು ದೇಶ, ಒಂದೇ ಚುನಾವಣೆ” ಚರ್ಚೆ ಸಂಬಂಧ ಶರ್ಟ್ ಬಿಚ್ಚಿ ಗಲಾಟೆ ಮಾಡಿದ ಭದ್ರಾವತಿಯ ಶಾಸಕ ಸಂಗಮೇಶ್ ಅವರನ್ನು ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ವಾರ ಸದನದಿಂದ ಅಮಾನತುಗೊಳಿಸಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾಗಿ ಸ್ಪೀಕರ್ ಅವರು ಭಾಷಣ ಮುಗಿಸಿ ಸದಸ್ಯರೆಲ್ಲರೂ ತಮ್ಮ ತಮ್ಮ ಆಸನಗಳಿಗೆ ಹಿಂತಿರುಗಬೇಕೆಂದು ಮನವಿ ಮಾಡಿದರು. ಆಗ ಶಾಸಕ ಬಿ.ಕೆ.ಸಂಗಮೇಶ್ ಒಂದು ದೇಶ, ಒಂದೇ ಚುನಾವಣೆ ಮೇಲಿನ ಚರ್ಚೆಗೆ ವಿರೋಧ ವ್ಯಕ್ತಪಡಿಸಿ, ಸದನದ ಬಾವಿಗಿಳಿದು ತಮ್ಮ ಶರ್ಟ್ ಕಳಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಘಟನೆಯಿಂದಾಗಿ ಸ್ಪೀಕರ್ ಕೆಂಡಾಮಂಡಲವಾಗಿದ್ದು, ಸಂಗಮೇಶ್ ಅಶಿಸ್ತಿನ ವರ್ತನೆಯನ್ನು ಸದನ ಒಪ್ಪುವುದಿಲ್ಲ. ತಕ್ಷಣ ಸ್ಪೀಕರ್ ಅವರ ಅಮಾನತಿಗೆ ನಿರ್ಧಾರ ಕೈಗೊಂಡರು. ಇಂತಹ ನಿರ್ಧಾರಕ್ಕೆ ಆಡಳಿತ ಪಕ್ಷ ಒಪ್ಪಿಗೆ ಸೂಚಿಸಿದ್ದು, ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಒಂದು ವಾರಗಳ ಕಾಲ ಅಮಾನತುಗೊಳಿಸುವುದಾಗಿ ಆದೇಶ ಹೊರಡಿಸಲಾಗಿದೆ.