Monday, August 15, 2022

Latest Posts

ದಾನ ಕೊಟ್ಟಿರುವುದನ್ನು ಹೇಳಲು ಸಂಕೋಚ, ಆದರೆ ಈಗ ದಾನದ ಪಟ್ಟಿ ತೆರೆದಿಡುವುದು ಅನಿವಾರ್ಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದವರ ಸಹಾಯಕ್ಕೆ  ಬಾಲಿವುಡ್ ನ ಅನೇಕ ಕಲಾವಿದರು ಬಂದಿದ್ದಾರೆ. ಆದರೆ ಅಮಿತಾಭ್ ಬಚ್ಚನ್ ಅವರು ಏನೂ ಮಾಡುತ್ತಿಲ್ಲ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೌನ ಮುರಿದು, ಈ ವಿಷಯವಾಗಿ ಪ್ರತಿಕ್ರಿಯಿಸಿದ ಅಮಿತಾಭ್ ಬಚ್ಚನ್, ನಾನು ಮಾಡಿದ ಕೆಲಸಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಮುಜುಗರದ ವಿಚಾರ. ದಾನ ಕೊಟ್ಟಿರುವುದನ್ನು ಹೇಳಿಕೊಳ್ಳಬಾರದು. ಇದುವರೆಗೂ ದಾನ ಕೊಟ್ಟಿರುವುದನ್ನು ಯಾರಲ್ಲಿಯೂ ಹೇಳುವುದಿಲ್ಲ.  ಯಾರಿಗೂ ಗೊತ್ತಾಗದಂತೆ ನನ್ನದೇ ರೀತಿಯಲ್ಲಿ ಸಹಾಯ ಮಾಡಿಕೊಂಡು ಬಂದಿದ್ದೇನೆ. ಆದರೆ ಕಷ್ಟದಲ್ಲಿರುವವರಿಗೆ ನೀವೇನು ಮಾಡಿದ್ದೀರಿ ಎಂಬ ಪ್ರಶ್ನೆ ಕೇಳಿ-ಕೇಳಿ ಸಾಕಾಗಿದೆ. ಹಾಗಾಗಿಯೇ ಏನು ಮಾಡಿದ್ದೇನೆ ಎಂದು ಹೇಳುವುದು ಅನಿವಾರ್ಯ ಎಂದಿದ್ದಾರೆ.

ಕಳೆದ ವರ್ಷ ದೇಶದಲ್ಲಿ 4,00,000 ಕ್ಕೂ ಹೆಚ್ಚು ದಿನಗೂಲಿ ಮಾಡುವವರಿಗೆ ಒಂದು ತಿಂಗಳ ಕಾಲ ಆಹಾರವನ್ನು ಒದಗಿಸಿದ್ದೇನೆ. ನಗರದಲ್ಲಿ ಸುಮಾರು 5,000 ಜನರಿಗೆ ಪ್ರತಿದಿನ ಊಟ ಒದಗಿಸಲಾಗಿದೆ. ಫ್ರಂಟ್‌ಲೈನ್ ವಾರಿಯರ್ಸ್‌ಗೆ ಮಾಸ್ಕ್, ಪಿಪಿಇ ಕಿಟ್ ಒದಗಿಸಿದ್ದೇನೆ.

ಕಳೆದ ವರ್ಷ 1,500 ರೈತರ ಸಾಲವನ್ನು ನನ್ನ ಪರ್ಸನಲ್ ಅಕೌಂಟ್​ನಿಂದ ತೀರಿಸಿದ್ದೇನೆ. ಈ ಮೂಲಕ, ಕಷ್ಟದಲ್ಲಿರುವ ಹಲವರನ್ನು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಪ್ಪಿಸಿದ್ದೇನೆ. ನಾಲ್ಕು ಲಕ್ಷ ಕಾರ್ವಿುಕರಿಗೆ ಒಂದು ತಿಂಗಳ ಕಾಲ ಊಟ ವಿತರಿಸಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss