ಸಿದ್ದಗಂಗಾ ಮಠ: ಮಗುವಿಗೆ ‘ಶಿವಮಣಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮಜಯಂತಿ ಪ್ರಯುಕ್ತ 115 ಮಕ್ಕಳಿಗೆ ನಾಮಕರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭ ಮುಸ್ಲಿಂ ಸಮುದಾಯದ ಮಗುವಿಗೆ ‘ಶಿವಮಣಿ’ ಎಂದು ಹೆಸರಿಡಲಾಗಿದೆ.
ತುಮಕೂರು ನಗರದ ಕ್ಯಾತ್ಸಂದ್ರದ ನಿವಾಸಿ ಶಾಹಿಸ್ತಾ ಮತ್ತು ಜಮೀರ್ ದಂಪತಿ ತಮ್ಮ ಮಗಳಿಗೆ ಶಿವಮಣಿ ಎಂದು ನಾಮಕರಣ ಮಾಡಿದ್ದಾರೆ.
ಶಿವಕುಮಾರ ಸ್ವಾಮೀಜಿ ಅವರ ವಿಚಾರಧಾರೆ ನಮಗೆಲ್ಲ ಮಾದರಿಯಾಗಿದೆ. ಅವರು ಸಮಾನತೆಯ ಸಂದೇಶ ಸಾರಿದ್ದರು. ಅವರ ಆದರ್ಶಗಳಲ್ಲೇ ನಾವು ಸಾಗುತ್ತೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಮಗುವಿಗೆ ‘ಶಿವಮಣಿ’ ಎಂದು ಹೆಸರಿಡಲಾಗಿದೆ ಎಂದರು.
ಡಾ. ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್​ನಿಂದ ಮಕ್ಕಳಿಗೆ ನಾಮಕರಣ ಕಾರ್ಯಕ್ರಮ ಮಾಡಲಾಯಿತು. ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಮಾಡುವುದರ ಜೊತೆಗೆ ಮಕ್ಕಳಿಗೆ ಬೇಕಾದ ತೊಟ್ಟಿಲು, ಹಾಸಿಗೆ ಸೇರಿದಂತೆ ಇತರೆ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!