ಪಾಲಿಕೆ ಚುನಾವಣೆ ಮೂಂದೂಡಿಕೆ: ನ್ಯಾಯಾಲಯದ ತೀರ್ಪೀಗೆ ತಲೆಬಾಗುತ್ತೇವೆ ಎಂದ ಸಿದ್ದಾಜಿ ಪಾಟೀಲ

ಹೊಸದಿಗಂತ ವರದಿ, ಕಲಬುರಗಿ:

ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೆಯರ್ ಚುನಾವಣೆ ಮೂಂದೂಡಿ ಕಲಬುರಗಿ ಹೈಕೋರ್ಟ ಆದೇಶ ಹೊರಡಿಸಿರುವುದನ್ನು ತಲೆಬಾಗಿ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ ತಿಳಿಸಿದ್ದಾರೆ.
ಹೈಕೋರ್ಟ ತಿರ್ಪಿನ ಬಳಿಕ ಮಾತನಾಡಿದ ಅವರು, ನಾವು ನಮ್ಮ ಪಕ್ಷದ ವರಿಷ್ಠರ, ತಜ್ಞರ ಜೊತೆಗೆ ಚರ್ಚಿಸಿ ಮೇಲ್ಮನವಿಯನ್ನು ಸಲ್ಲಿಸಲಿದ್ದೇವೆ. ಈ ತೀರ್ಪು ಬಿಜೆಪಿ ಪಕ್ಷಕ್ಕೆ ಹಿನ್ನಡಯೂ ಅಲ್ಲ, ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆಯೂ ಅಲ್ಲ. ಚುನಾವಣೆಯ ಲೋಪದೋಷಗಳನ್ನು ನ್ಯಾಯಾಲಯದಲ್ಲಿ ತೋರಿಸಿಲಾಗಿದೆ. ಹೀಗಾಗಿ ಮೇಲ್ಮನವಿ ಸಲ್ಲಿಸಲಿದ್ದು, ನಮಗೆ ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಐವರು ವಿಧಾನ ಪರಿಷತ್ ಸದಸ್ಯರ ಸೇರ್ಪಡೆ ಬಗ್ಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ವಾಸಸ್ಥಳ ಮಾಡಿಕೊಂಡು ಕಲಬುರಗಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಭಾರತ ದೇಶದ ಪ್ರಜೆಯೂ ಯಾವ ಜಿಲ್ಲೆಯಲ್ಲಾದರೂ ವಾಸವಿರಬಹುದು.ಅದಕ್ಕೆ ಕಾನೂನಿನಲ್ಲಿ ಯಾವ ತೊಡಕು ಸಹವಿಲ್ಲ. ಕಾಂಗ್ರೆಸ್ ಪಕ್ಷವು ಈ ಹೆಂದೆ ಬೆಂಗಳೂರಿನ ಪಾಲಿಕೆ ಚುನಾವಣೆಯಲ್ಲಿ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದು ಆಡಳಿತ ನಡೆಸಿದ್ದು,ಇತಿಹಾಸವಿದೆ. ನಾವು ಮಾಡಿದರೆ ವಾಮಮಾರ್ಗದ ಪಟ್ಟ. ಆದರೆ ಅವರು ಮಾಡಿದ್ದು ಸರಿ ಎಂದರೆ ಇದು ಸರಿಯಲ್ಲ ಎಂದರು.
2018ರಿಂದ ಪಾಲಿಕೆಯಲ್ಲಿ ಚುನಾವಣೆ ನಡೆದಿಲ್ಲ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ. ಪಾಲಿಕೆ ಚುನಾವಣ ನಡೆಯದೇ ಕಲಬುರಗಿ ಅಭಿವೃದ್ಧಿಯಿಂದ ವಂಚಿತಗೊಳ್ಳತ್ತಿದೆ. ಪಾರದರ್ಶಕವಾಗಿ ಚುನಾವಣೆ ನಡೆಸಬೇಕೆಂದರು, ಕಾಂಗ್ರೆಸ್ ಅರ್ಜಿಗಳನ್ನು ಸಲ್ಲಿಸಿ ತಡೆಯಾಜ್ಷೆ ತಂದಿದೆ. ಕಾಂಗ್ರೆಸ್ ಪಕ್ಷವು ಅಧಿಕಾರವಿಲ್ಲದೇ, ನೀರಿನಿಂದ ಹೊರಬಂದ ಮೀನಿನಂತೆ ಒದ್ದಾಡುತ್ತಿದೆ. ಹೀಗಾಗಿ ಅವರಿಗೆ ಪಾಲಿಕೆ ಒಂದೆ ದಾರಿಯಾಗಿದ್ದು, ಹೀಗಾಗಿ ನಮ್ಮ ಅಧಿಕಾರಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದರು. ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಾಲಿಕೆಯಲ್ಲಿ ನೂರಕ್ಕೆ ನೂರು ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!