ಹೊಸದಿಗಂತ ವರದಿ,ವಿಜಯಪುರ:
ಜಿಲ್ಲೆಯಲ್ಲಿ 11 ಸಾವಿರ ಇದ್ದ ವಕ್ಫ್ ಆಸ್ತಿ ಈಗ 16 ಸಾವಿರ ಆಗಿದೆಯಂತೆ. ಹಿಂದುಗಳಿಗೆ ಇನ್ನೂ ತಾಳ್ಮೆ ಇದೆ. ಸಿದ್ದರಾಮಯ್ಯ ನವರೇ ವರ ಬೇಕೋ, ಶಾಪ ಬೇಕೋ ತೀರ್ಮಾನ ಮಾಡಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ವಕ್ಫ್ ರದ್ದತಿಗೆ ಆಗ್ರಹಿಸಿ ಹಮ್ಮಿಕೊಂಡ ಅಹೋರಾತ್ರಿ ಧರಣಿಗೆ ಬೆಂಬಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಸರ್ಕಾರದ ಮಂತ್ರಿಗಳಿಗೆ ನನ್ನ ಪ್ರಾರ್ಥನೆ. ಇವರು ಮಂತ್ರಿಗಳಾಗಿ ಬದುಕಬೇಕು ಎಂಬ, ಕುರ್ಚಿ ಬೇಕು ಎಂಬ ಕಾರಣಕ್ಕೆ ರಾಜ್ಯದ ಮಂತ್ರಿಗಳು ಮಾತನಾಡುತ್ತಿಲ್ಲ, ನೀವು ಮಂತ್ರಿಯಾಗಿರುವುದಕ್ಕಿಂತ ಸಾಯುವುದೇ ಲೇಸು ಎಂದರು.
ನಮ್ಮ ಆದೇಶ ಅಲ್ಲ, ಮುಖ್ಯಮಂತ್ರಿ ಗಳ ಆದೇಶ ಎಂದು ಆ ಅಯೋಗ್ಯ ಹೇಳುತ್ತಿದ್ದಾನೆ. ನೊಟೀಸ್ ಕೊಡ್ಟಿದ್ದು ತಪ್ಪು ಎಂದಾದಾಗ ಅದು ವಾಪಸ್ ಪಡೆಯುವುದು ಇದ್ಯಾವ ನ್ಯಾಯ. ಮುಖ್ಯಮಂತ್ರಿ ಗಳು ತಪ್ಪಾಗಿದೆ ವಾಪಸ್ ಪಡೆಯುತ್ತಿದ್ದೇನೆ ಎಂದು ಹೇಳು ಬಹುದಿತ್ತು ಎಂದರು.
ಚಾಮುಂಡಿ ಬೆಟ್ಟಕ್ಕೆ ನಮ್ಮಗಿಂತ ಜಾಸ್ತಿ ಸಿದ್ದರಾಮಯ್ಯ ನವರೇ ಹೊರಟಿದ್ದಾರೆ, ಮೊದಲು ದೇವರಿಗೆ ಹೋಗದವರು ಈಗ ಎಲ್ಲೆಡೆ ಹೋಗುತ್ತಿದ್ದಾರೆ ಎಂದರು.
ಅನ್ಯಾಯವಾಗಿ ಮಠ, ಮಂದಿರದ, ಶಾಲಾ ಕಾಲೇಜುಗಳ ಜಾಗಗಳಿಗೆ ನೊಟೀಸ್ ಕೊಡುವುದು ವಾಪಸ್ ಪಡೆಯುವದು ಮಾಡಬಾರದು. ನೀವು ಹಿಗೆ ಮುಂದುವರೆಸಿದರೆ ದೇವರ ಶಾಪದಿಂದ ನೀವು ಸಿಎಂ ಸ್ಥಾನ ಕಳೆದುಕೊಳ್ಳುತ್ತೀರಾ ಎಂದರು.
ಧರ್ಮವನ್ನು ಉಳಿಸುವುದು ಮಠ, ಮಂದಿರಗಳು ಅವುಗಳಿಗೆ ನೀವು ನೊಟೀಸ್ ಕೊಟ್ಟರೆ ಹೇಗೆ. ಮುಸಲ್ಮಾನ ದ್ರೋಹಿಗಳು ಹೀಗೆ ಮಾಡಿದ್ದು ನೀವು ಹೇಗೆ ಸುಮ್ಮನಿರುತ್ತೀರಾ ? ಎಂದರು.
ಸಿಂದಗಿಯಲ್ಲಿ ವೀರಕ್ತಮಠ, ಆಳಂದದಲ್ಲಿ ಬೀರಲಿಂಗೇಶ್ವರ ದೇವಾಲಯ ವಕ್ಫ್ ಮಾಡಿಕೊಂಡಿದ್ದಾರೆ. ಮುಸಲ್ಮಾನ ನಾಯಕ ಆಗಲು ಸಿದ್ದರಾಮಯ್ಯ ಹೊರಟಿದ್ದೀಯಾ ಎಂದು ಟೀಕಿಸಿದರು.
ನೀವು ಹಿಗೇ ಮುಂದುವರೆಸಿದರೆ ರಕ್ತಪಾತವಾಗುತ್ತದೆ. ನಾನು ಇಲ್ಲಿಗೆ ಬೆಂಬಲ ಕೊಡಲು ಬಂದಿಲ್ಲ. ಇಲ್ಲಿ ಪ್ರೇರಣೆ ತಗೊಂಡು ಹೋಗಿ ಎಲ್ಲಡೆ ಹೋರಾಟಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಇಲ್ಲಿಗೆ ಬಂದಿರುವೆ ಎಂದರು.
ಇಡೀ ರಾಜ್ಯದಲ್ಲಿ ಮಂಚೂಣಿಯಲ್ಲಿರುವ ನಾಯಕ ಬಸನಗೌಡ ಪಾಟೀಲ ಯತ್ನಾಳ. ಈ ದುಷ್ಟ ಕಾಂಗ್ರೆಸ್ ಸರ್ಕಾರ ಮುಸ್ಲಿಲ್ಮಾನರಿಗೆ ತಲೆಬಗ್ಗಿಸಿದೆ ಎಂದರು.