spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, January 17, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

“ಸಿದ್ದರಾಮಯ್ಯ-ಎಂ. ಬಿ. ಪಾಟೀಲ ದಲಿತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ”

- Advertisement -Nitte

ಹೊಸ ದಿಗಂತ‌ ವರದಿ, ಬಾಗಲಕೋಟೆ:

ರಾಜ್ಯದಲ್ಲಿ ದಲಿತ ಸಮುದಾಯದವರನ್ನು ಹತ್ತಿಕ್ಕುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲರು ಮಾಡುತ್ತಿದ್ದಾರೆ. ಒಗ್ಗಟ್ಟಾಗಿರುವ ಅಸ್ಪ್ರಶ್ಯರನ್ನು ಒಡೆದು ಹಾಕುವ ಕೆಲಸವನ್ನು ಇಬ್ಬರೂ ನಾಯಕರು ಕೂಡಿಕೊಂಡು ಮಾಡುತ್ತಿದ್ದು ಇವರಿಗೆ ತಕ್ಕ ಪಾಠವನ್ನು ಪರಿಷತ್ ಚುನಾವಣೆಯಲ್ಲಿ ಕಲಿಸಲಿದ್ದೇವೆ ಎಂದು  ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳದಲ್ಲಿ ಆರ್.ಬಿ.ತಿಮ್ಮಾಪೂರ ಅವರಿಗೆ ನಾಗಠಾಣದಲ್ಲಿ ರಾಜು ಆಲಗೂರ ಈಗ ಎಸ್.ಆರ್.ಪಾಟೀಲರಿಗೆ ಕಾಂಗ್ರೆಸ್ದಿಂದ ಟಿಕೆಟ್ ತಪ್ಪಿಸಿ ಅಸ್ಪ್ರಶ್ಯರ ರಾಜಕೀಯ ಅಸ್ಮಿತೆಗೆ ಪೆಟ್ಟು ನೀಡಿ ಹಗೆತನ ಸಾಧಿಸುತ್ತಿರುವ ಎಂ.ಬಿ.ಪಾಟೀಲರ ಕ್ರಮವನ್ನು ಖಂಡಿಸಿದರು.

ಪೂಜಾರ ಬೆಂಬಲಿಸಲು ನಿರ್ಧಾರ: ಈಗ ನಡೆಯುತ್ತಿರುವ ಪರಿಷತ್ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲರ ವಿರುದ್ಧ ಮತ ಚಲಾಯಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಅವರನ್ನು ಬೆಂಬಲಿಸಲು ಮಾದಿಗ ಮಹಾಸಭಾ ನಿರ್ಧಾರ ಮಾಡಿದೆ. ಇನ್ನೋಂದು ಮತವನ್ನು ಪಕ್ಷೇತರ ಅಭ್ಯಥರ್ಿಗೆ ನೀಡುತ್ತೇವೆ ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ನಮ್ಮ ಸಮಾಜದವರು ಮತ ನೀಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕರನ್ನು ಹತ್ತಿಕ್ಕುವ ಕೆಲಸವನ್ನು ಇಬ್ಬರೂ ನಾಯಕರು ಮಾಡುತ್ತಿದ್ದಾರೆ. ಆದರೆ ಬಿಜೆಪಿಗೆ ಹೊಟ್ಟೆ ಪಾಡಿಗಾಗಿ ದಲಿತರು ಹೋಗಿದ್ದಾರೆಂದು ಸಿದ್ಧರಾಮಯ್ಯನವರು ಹೇಳಿಕೆಗೆ ತಿರುಗೇಟು ನೀಡಿದ ಮುತ್ತಣ್ಣ ಬೆಣ್ಣೂರ, ಬಿಜೆಪಿಯಲ್ಲಿ ದಲಿತರ ನಾಯಕರಿಗೆ ಸ್ಥಾನಮಾನ, ಗೌರವ ಸಿಗುತ್ತಿದೆ ಆದರೆ ಕಾಂಗ್ರೆಸ್ ಪಕ್ಷದಲ್ಲಿ ತುಳಿಯುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಸಿಂದಗಿ ಉಪಚುನಾವಣೆಯಲ್ಲಿ ಸಮುದಾಯದ ವೇದಿಕೆಯಲ್ಲಿ ಜನಾಂಗದ ರಾಜಕಾರಣಿಗಳ ವಿರುದ್ಧ ಸಿದ್ಧರಾಮಯ್ಯನವರ ಮೂಲಕ ಮಾತನಾಡಿಸಿದ್ದು ಮಾದಿಗ ಸಮುದಾಯಕ್ಕೆ ತುಂಬಾ ನೋವಾಗಿದೆ. ಸುನೀಲಗೌಡ ಪಾಟೀಲರನ್ನು ಪರಿಷತ್ ಚುನಾವಣೆಯಲ್ಲಿ ಸೋಲಿಸುವ ಮೂಲಕ ಆ ನೋವನ್ನು ನಿವಾರಿಸಿಕೊಳ್ಳಬೇಕಾಗಿದೆ ಎಂದು ಮಾದಿಗ ಸಮುದಾಯದ ಮತದಾರರಿಗೆ ತಿಳಿಸಿದರು.

ದಲಿತ ಸಮುದಾಯದವರಲ್ಲಿ ಸಾಮರಸ್ಯ ಹದಗೆಡಿಸಿ ಪರಸ್ಪರರನ್ನು ಎತ್ತಿ ಕಟ್ಟುತ್ತಾ ಸೇಡಿನ ರಾಜಕಾರಣ ಮಾಡುತ್ತಿರುವ ಮಾಜಿ ಸಚಿವ ಎಂ.ಬಿ.ಪಾಟೀಲರವರನ್ನು ಕಾಂಗ್ರೆಸ್ ರಾಜಕಾರಣದಿಂದ ಸರಿಸಲು ಅವಕಾಶ ಸಿಕ್ಕಿದ್ದು, ವಿಜಯಪುರ -ಬಾಗಲಕೋಟೆ ಜಿಲ್ಲೆಯಲ್ಲಿರುವ ಸಮಸ್ತ ಮಾದಿಗ ಸಮುದಾಯದ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾದಿಗರ ಅಸ್ಮಿತೆಗಾಗಿ ಸುನೀಲಗೌಡರ ವಿರುದ್ಧ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಇತ್ತೀಚಿಗೆ ನಡೆದ ಅಧಿವೇಶನದಲ್ಲಿ ನಿರಪರಾಧಿಯಾಗಿರುವ ನರ್ಸ್ ಕಸ್ತೂರಿ ನಡುವಿನಮನಿ ಅವರ ಮೇಲೆ ಶಿಶು ಮಾರಾಟವಾಗಿದೆ ಎಂದು ಅಧಿವೇಶನದಲ್ಲಿ ಅಪಪ್ರಚಾರ ಮಾಡಿ ಜನಾಂಗೀಯ ನಿಂದನೆ ಮಾತನಾಡಿದ್ದು ಅತ್ಯಂತ ಮೂರ್ಖತನದ ಪರಮಾವಧಿಯಾಗಿದೆ. ಕಸ್ತೂರಿ ನಡುವಿನಮನಿ ನಿರಪರಾಧಿಯಾಗಿದ್ದಾರೆಂದು ಜಿಲ್ಲಾಡಳಿತ ಅವರನ್ನು ಪುನರ್ ಕೆಲಸಕ್ಕೆ ನೇಮಿಸಿಕೊಂಡಿದೆ. ಆದರೆ ಎಂ.ಬಿ.ಪಾಟೀಲರು ಸದನದಲ್ಲಿ ಮಾಡಿದ ಅಪವಾದ ಕುರಿತು ಇಲ್ಲಿಯವರೆಗೆ ಕ್ಷಮೆ ಕೋರಿಲ್ಲ ಎಂದರು.

ಅನಾಗರಿಕ ನಡೆ ಹೊಂದಿರುವ ಎಂ.ಬಿ.ಪಾಟೀಲರು ದುಡ್ಡಿನ ಮೇಲೆ ಕಾಂಗ್ರೆಸ್ ರಾಜಕಾರಣ ಮಾಡುತ್ತಿರುವುದು ಅತ್ಯಂತ ನಾಚಿಕಗೇಡಿನ ಸಂಗತಿಯಾಗಿದೆ. ಡಾ.ಜಿ.ಪರಮೇಶ್ವರ ದಲಿತ ಮುಖ್ಯಮಂತ್ರಿ ನೀಡಲು ರಾಜ್ಯಾದ್ಯಂತ ಧ್ವನಿ ಎದ್ದಾಗ ಪ್ರತಿ ಸ್ಪಧರ್ಿಯಾಗಿ ನಾನು ಮುಖ್ಯಮಂತ್ರಿ ಎಂದು ಬಿಂಬಿಸಿ ಡಾ.ಪರಮೇಶ್ವರರಿಗೆ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಲು ಮುಂದಾಗಿದ್ದು ಗುಟ್ಟೇನಾಗಿ ಉಳಿದಿಲ್ಲ ಎಂದರು.

ಜಿಲ್ಲಾಧ್ಯಕ್ಷ ಸತೀಶ ಸೂಳಿಕೇರಿ, ಕಾರ್ಯದಶರ್ಿ ಲಕ್ಷ್ಮಣ ಕಮತಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss