Saturday, August 13, 2022

Latest Posts

ಕೊರೋನಾ ಲಸಿಕೆ ಪಡೆದ ಸಿದ್ದರಾಮಯ್ಯ

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಧಾನಸಭಾ ಕಲಾಪದ ಬಳಿಕ ಸಿದ್ದರಾಮಯ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಪಡೆದರು.
ಲಸಿಕೆ ಪಡೆದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್, ಸಚಿವ ಆರ್ ಅಶೋಕ್ ಸಾಥ್ ನೀಡಿದರು.
ಲಸಿಕೆ ಪಡೆದ ಬಳಿಕ ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದ ಸಿದ್ದರಾಮಯ್ಯಗೆ ನರ್ಸ್​ ಸರ್​ ವ್ಯಾಕ್ಸಿನ್​ ಹಾಕಿ ಆಯ್ತು ಎಂದು ಹೇಳಿದರು. ಅದಕ್ಕೆ ಕೊಂಚ ಆಶ್ಚರ್ಯಗೊಂಡ ಸಿದ್ದರಾಮಯ್ಯ, ಹೌದಾ? ಗೊತ್ತೇ ಆಗಲಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.
ರಾಜ್ಯದಲ್ಲಿ ಕೊರೋನಾಲಸಿಕೆ ವಿತರಣೆ ಕಾರ್ಯ ಭರದಿಂದ ಸಾಗುತ್ತಿದೆ. ಜನಪ್ರತಿನಿಧಿಗಳು, ರಾಜಕಾರಣಿಗಳು ಒಬ್ಬೊಬ್ಬರಾಗಿಯೇ ಕೊರೊನಾ ಲಸಿಕೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss