ಸಿಎಂ ಆದ ಬಳಿಕ ರಾಜ್ಯದ ಜನರನ್ನುದ್ದೇಶಿಸಿ ಸಿದ್ದರಾಮಯ್ಯ ಮೊದಲ ಭಾಷಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪದಗ್ರಹಣ ಮಾಡಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಗೆಲ್ಲಿಸಿದ್ದಕ್ಕೆ ರಾಜ್ಯದ ಜನತೆಗೆ ಕೃತಜ್ಞತೆ ತಿಳಿಸಿದರು.

ʻಇಂದು ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು, ಇಡೀ ಕರ್ನಾಟಕದ ಏಳು ಕೋಟಿ ಜನರ ಗೆಲುವು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಈ ರಾಜ್ಯದ ಜನರ ಆಶೀರ್ವಾದ ಕಾರಣ.  ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯ ಮೂಲಕ ಪ್ರಚಾರ ಪ್ರಾರಂಭ ಆಯಿತು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕರು ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದʼಗಳನ್ನು ಅರ್ಪಿಸಿದರು.

ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ

ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತವನ್ನು ಕೊಡುತ್ತೇವೆ. ಜನ ಬದಲಾವಣೆಯನ್ನು ಬಯಸಿದ್ದಾರೆ, ಜನರಿಗೆ ಕೊಟ್ಟ ಭರವಸೆ, ಕಾಂಗ್ರೆಸ್‌ ಕೊಟ್ಟ ಐದೂ ಗ್ಯಾರೆಂಟಿಗಳನ್ನು ಇಂದೇ ಒಪ್ಪಿಗೆ ನೀಡುತ್ತೇವೆ. ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಒಪ್ಪಿಗೆಯನ್ನು ಕೊಟ್ಟು ಆದೇಶವನ್ನು ಹೊರಡಿಸಿ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತೇವೆ ಎಂದರು.

ಇದು ಕನ್ನಡ ನಾಡಿನ ಜನತೆಗೆ ನಮ್ಮ ನೂತನ ಸರ್ಕಾರ ಕೊಡುತ್ತಿರುವ ವಾಗ್ದಾನ ಎಂದರು. ಜೊತೆಗೆ ಪ್ರಣಾಳಿಕೆಯಲ್ಲಿ ಕೊಟ್ಟಂತಹ ಎಲ್ಲಾ ಭರವಸೆಗಳನ್ನು ಈ ಐದು ವರ್ಷಗಳಲ್ಲಿ ಈಡೇರಿಸುವ ಕೆಲಸ ಮಾಡ್ತೇವೆ. ಹಿಂದೆ ನುಡಿದಂತೆ ನಡೆದಿದ್ದೇವೆ, ಮುಂದೆಯೂ ನುಡಿದಂತೆ ನಡೆಯುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!