ಸಿದ್ದರಾಮಯ್ಯರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ: ನಳಿನ್ ಕುಮಾರ್ ಕಟೀಲ್

ಹೊಸದಿಗಂತ ವರದಿ,ಮೈಸೂರು:

ಖಳನಾಯಕ, ನರಹಂತಕ ಸಿದ್ದರಾಮಯ್ಯರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಶನಿವಾರ ಸಂಜೆ ಮೈಸೂರಿನ ವಿದ್ಯಾರಣ್ಯಪುರಂ ಬೂತಾಳೆ ಆಟದ ಮೈದಾನದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರ ಮತ್ತು ಬಿಎಲ್‌ಎಗಳ ಸಭೆ,ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಶಂಖ ಊದುವುದರ ಮೂಲಕ ಉದ್ಘಾಟಿಸಿ ವಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು.ಬಾದಾಮಿಯಲ್ಲಿ ವಾಪಸ್ ಹೋಗಿ ಎನ್ನುತ್ತಿದ್ದಾರೆ. ಕೋಲಾರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಹಾಗಾಗಿ ಅವರು ರಾಹುಲ್‌ಗಾಂಧಿಯವರೊoದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಮೇಲಿನ ಪ್ರೀತಿಯಿಂದ ಹೋಗಲಿಲ್ಲ, ಬದಲಾಗಿ ಕ್ಷೇತ್ರವನ್ನು ಹುಡುಕಿಕೊಳ್ಳುವುದಕ್ಕಾಗಿ ಓಡೋಡಿ ಹೋಗುತ್ತಿದ್ದರು. ಹಿಂದುಳಿದ ವರ್ಗಗಳ ಹೆಸರನ್ನೇಳುವ ಅವರು ಯಾವುದೇ ಕಾರ್ಯಕ್ರಮಗಳನ್ನು ಮಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ,ಜಿ.ಪರಮೇಶ್ವರ್ ಸೋಲಿಸಿದ್ದರಿಂದಾಗಿ ಈ ಬಾರಿ ತಮ್ಮನ್ನು ಎಲ್ಲಿ ಸೋಲಿಸಿ ಬಿಡುತ್ತಾರೆಂಬ ಭಯ ಆವರಿಸಿದೆ. ವಿಜಯ ಸಂಕಲ್ಪ ಯಾತ್ರೆಯಿಂದ ಸಿದ್ದರಾಮಯ್ಯರಿಗೆ ಭಯ ಕಾಡುತ್ತಿದೆಯೇ ಹೊರತು ನಮಗಲ್ಲ ಎಂದು ತಿರುಗೇಟು ನೀಡಿದರು.ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಶೇ.40ರಷ್ಟು ಕಮಿಷನ್ ಬಗ್ಗೆ ವಾತನಾಡುವ ಸಿದ್ದರಾಮಯ್ಯನವರೇ ಅವರೇ ನಿಮ್ಮ ಅವಧಿಯಲ್ಲಿ ನಡೆದಿರುವ ಹಗರಣಗಳು ಒಂದೊoದಾಗಿ ಹೊರ ಬರುತ್ತಿವೆ. ಅರ್ಕಾವತಿ ಬಡಾವಣೆಯ ಪ್ರಕರಣ ನಿಮಗೆ ಉರುಳಾಗಲಿದೆ. ಇನ್ನು ಮುಂದೆ ರಾಜ್ಯದಲ್ಲಿ ಮುಂದೆ ಸಿದ್ದರಾಮಯ್ಯ ಅವರ ಆಟ ನಡೆಯುವುದಿಲ್ಲ ಎಂದು ಗುಡುಗಿದರು.

ನರಹಂತಕ ಸಿದ್ದರಾಮಯ್ಯ: ಹಿಂದೂಗಳ ಮಾರಣಹೋಮ ನಡೆಸಿದ ಟಿಪ್ಪು ಹೆಸರನ್ನು ಬದಲಿಸಿ ಒಡೆಯರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಇಡೀ ದೇಶಕ್ಕೆ ಮೈಸೂರಿನ ರಾಜ ಒಡೆಯರ್‌ರವರ ಕೊಡುಗೆ ಅಪಾರವಾಗಿದೆ. ಆದರೆ ಒಡೆಯರ್ ಅವರನ್ನು ಏಕವಚನದಿಂದ ನಿಂದಿಸಿ, ಖಳನಾಯಕನಾಗಿರುವ ಸಿದ್ದರಾಮಯ್ಯ ನರಹಂತಕ ಕೂಡ ಆಗಿದ್ದಾರೆ. ಅವರ ಆಡಳಿತದ ಸರ್ಕಾರದಲ್ಲಿ 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದರೂ ಕಣ್ಣೀರು ಹಾಕಲಿಲ್ಲ. ಒಂದು ಪೈಸೆ ಪರಿಹಾರ ಕೊಡಲಿಲ್ಲ. ಪಿಎಫ್‌ಐ ನಿಷೇಧದ ಸವಾಲು ಹಾಕುವ ಸಿದ್ದರಾಮಯ್ಯ, ಜೈಲಿನಲ್ಲಿದ್ದವರನ್ನು ಬಿಡುಗಡೆ ಮಾಡಿ, ಅವರನ್ನು ಬೆಳೆಸಿದ ಫಲವಾಗಿ ಇಂದು ಬೇರೂರಲು ಕಾರಣವಾಗಿದೆ.ನೀವೊಬ್ಬ ಖಳನಾಯಕ ಅಲ್ಲದೆ,ನರಹಂತಕರೂ ಆಗಿದ್ದೀರಾ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯರ ಆಡಳಿತದಲ್ಲಿ ಮೂರು ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಬೆಳಗಾವಿಯ ವಿಧಾನಸಭೆ ಮುಂದೆಯೇ ರೈತ ಆತ್ಮಹತ್ಯೆ ಮಾಡಿಕೊಂಡರೂ , ಪರಿಹಾರ ನೀಡಲಿಲ್ಲ, ಡಿವೈಎಸ್ಪಿ ಗಣಪತಿ ಸೇರಿದಂತೆ ಹಲವು ಮಂದಿ ಹಿರಿಯ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು. ಆದರೆ ಅಧಿಕಾರಿಗಳಿಗೂ ರಕ್ಷಣೆ ಕೊಡಲಿಲ್ಲ. ಮತ ಬ್ಯಾಂಕ್‌ಗಾಗಿ ಹೀನ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರು ಎಸ್‌ಡಿಪಿಐ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಿದ್ದು ಯಾಕೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯಮೇಲೆ ದಾಳಿಮಾಡಿ, ಬೆಂಕಿ ಹಚ್ಚಿದ ಸಂಪತ್‌ರಾಜ್‌ರನ್ನು ಉಚ್ಛಾಟನೆ ಮಾಡದೆ ಕಾಂಗ್ರೆಸ್‌ನಲ್ಲಿ ಮುಂದುವರಿಸಲಾಗಿದೆ. ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಇಲ್ಲವೆಂದು ಮೇಲೆ ನಮಗೆಲ್ಲಿ ರಕ್ಷಣೆ ಸಿಗುತ್ತದೆ ಎಂದು ಜನರು ಕಾಂಗ್ರೆಸ್‌ನಿAದ ದೂರವಾಗುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡುವುದಿಲ್ಲ. ಸೈದ್ಧಾಂತಿಕ ವಿಚಾರಧಾರೆಯನ್ನು ಮುಂದಿಟ್ಟು ಕೆಲಸ ಮಾಡಲಿದೆ. ಪ್ರಧಾನಮಂತ್ರಿ ನರೇಂದ್ರಮೋದಿ, ಅಮಿತ್‌ಷಾ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಕೃಷ್ಣರಾಜ ಕ್ಷೇತ್ರದಿಂದಲೇ ಗೆಲುವು ಆರಂಭವಾಗಲಿದೆ ಎಂದರು.
ಕಾAಗ್ರೆಸ್ ಮುಳುಗುತ್ತಿದೆ; ಪಂಚಭೂತಗಳಲ್ಲಿಯೂ ಭ್ರಷ್ಟಾಚಾರ ನಡೆಸಿರುವ ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಜನಕವಾಗಿದೆ. ಕಳೆದ 60 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಬಿಟ್ಟರೆ ಉಳಿದ ಎಲ್ಲಾ ಪ್ರಧಾನಿಗಳ ಆಡಳಿತದಲ್ಲಿ ಭ್ರಷ್ಟಾಚಾರಗಳು ವ್ಯಾಪಕವಾಗಿ ನಡೆದಿವೆ. ಆ ಪಕ್ಷದ ನಾಯಕಿ, ನಾಯಕ, ಸೋನಿಯಾಗಾಂಧಿ ಅಳಿಯ ವಾದ್ರಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಬೇಲ್ ನಲ್ಲಿದ್ದಾರೆ. ಹಾಗಾಗಿ ದೇಶದ ಜನರು ಕಾಂಗ್ರೆಸ್‌ನ್ನು ಎಲ್ಲಾ ಚುನಾವಣೆಗಳಲ್ಲೂ ತಿರಸ್ಕರಿಸುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿದೆ. ಬರುವ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಜನರಿಂದ ತಿರಸ್ಕಾರಗೊಳ್ಳಲಿದೆ. ರಾಜ್ಯದಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಂಡೆ ಚಿಂದಿ, ಚಿಂದಿಯಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!