ಡ್ರಗ್ಸ್ ಕೇಸ್​​​ನಲ್ಲಿ ಸಿದ್ಧಾಂತ್‌ ಕಪೂರ್‌ ಅರೆಸ್ಟ್: ವಿಚಾರಣೆ ಬಳಿಕ ನಟಿ ಶ್ರದ್ಧಾ ಕಪೂರ್‌ ಸಹೋದರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೊಲೀಸರು ಡ್ರಗ್ಸ್ ಕೇಸ್​​​ನಲ್ಲಿ ನನ್ನನ್ನು ಬಂಧಿಸಿದ್ದರು. ತನಿಖೆಗೆ ಸಹಕಾರ ನೀಡಿದ್ದೇನೆ. ಡ್ರಗ್ಸ್ ವಿರುದ್ಧ ಬೆಂಗಳೂರು ನಗರ ಪೊಲೀಸರು ಕಾರ್ಯಾಚರಣೆ ಶಾಘ್ಲನೀಯ ಎಂದು ಡ್ರಗ್ಸ್‌ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಕ್ತಿ ಕಪೂರ್ ಪುತ್ರ ಹಾಗು ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಸಹೋದರ ಸಿದ್ಧಾಂತ್‌ ಕಪೂರ್‌ ಹೇಳಿದ್ದಾರೆ.
ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ ಜನರ ಜೀವನ ಉಳಿಸುವ ಕೆಲಸ ಮುಂದುವರೆಸಲಿ. ನಾನು ಎಲ್ಲಾ ರೀತಿಯಿಂದಲೂ ಪೊಲೀಸರಿಗೆ ಸಹಕಾರ ನೀಡಿದ್ದೇನೆ, ಮುಂದೆ ವಿಚಾರಣೆಗೆ ಕರೆದಾಗಲೂ ಬರಲು ಸಿದ್ಧ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!