ಹೊಸದಿಗಂತ ಆನ್ಲೈನ್ ಡೆಸ್ಕ್:
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಸಿನಿಮಾ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ.
ರಶ್ಮಿಕಾಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಹೇಗೆ ಫಾಲೋವರ್ಸ್ ಇದ್ದಾರೋ ಅದೇ ರೀತಿಯಲ್ಲಿ ಸಿದ್ಧಾರ್ಥ್ಗೂ ತಮಿಳು ಫ್ಯಾನ್ ಫಾಲೋವರ್ಸ್ ಹೆಚ್ಚಾಗಿದ್ದಾರೆ.
ಈ ಬಗ್ಗೆ ಫ್ಯಾನ್ ಒಬ್ಬ ‘ನಾನು ತಮಿಳು ಹುಡುಗ. ನನಗೆ ನಿಮ್ಮ ಆಕ್ಟಿಂಗ್ ತುಂಬಾನೇ ಇಷ್ಟ. ಎಲ್ಲ ತಮಿಳಿಗರಿಗೂ ನೀವು ಅಂದರೆ ಇಷ್ಟ. ಹಾಗಾಗಿ ತಮಿಳು ಸಿನಿಮಾ ಮಾಡಿ ಸರ್’ ಎಂದು ಹೇಳಿದ್ದಾರೆ.
ಅದಕ್ಕೆ ಸಿಡ್ ‘ಓಕೆ ದೆನ್’ ಎಂದು ರಿಪ್ಲೇ ಮಾಡಿದ್ದಾರೆ. ಈ ಮೂಲಕ ತಮಿಳು ಸಿನಿಮಾದಲ್ಲಿಯೂ ನಟಿಸೋದಕ್ಕೆ ಇಷ್ಟ ಇದೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ. ಇದೇ ಟ್ವೀಟ್ಗೆ ರಶ್ಮಿಕಾ ಮಂದಣ್ಣ ಕೂಡ ಉತ್ತರ ಕೊಟ್ಟಿದ್ದು, ‘ನಾನು ನೋಡುತ್ತೇನೆ ಯಾವಾಗ ಅಭಿನಯಿಸ್ತೀರಿ ಎಂದು’ ತಮಾಷೆ ಮಾಡಿದ್ದಾರೆ.
Ok then 😊😉 https://t.co/RsfYUeCqsd
— Sidharth Malhotra (@SidMalhotra) September 16, 2021