ದಲೇರ್, ಸಿಧುಗೆ ಸಿಕ್ತು ನೌಕರಿ: ಕಂಬಿ ಹಿಂದೆ ರೈಟರ್ ನೀಡಲಿದ್ದಾರೆ ಕ್ಲಕ್೯ಗೆ ಸಾಥ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಈಗ ಖ್ಯಾತ ಗಾಯಕ ದಲೇರ್ ಮೆಹಂದಿ ಜೊತೆಯಾಗಿದ್ದಾರೆ.
ಪಟಿಯಾಲದ ಸೆಂಟ್ರಲ್ ಜೈಲ್ಲಿ ಇಬ್ಬರನ್ನೂ ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ.

ಫುಲ್ ಡ್ಯೂಟಿ!
ಈ ಇಬ್ಬರಿಗೂ ಜೈಲು ಆಡಳಿತ ಕೆಲಸ ನೀಡಿದ್ದು, ಸಿದ್ದುಗೆ ಕ್ಲರ್ಕ್ ಕೆಲಸ ಸಿಕ್ಕಿದ್ದರೆ, ದಲೇರ್ ಮೆಹಂದಿಗೆ ದಾಖಲೆಗಳನ್ನು ಬರೆದುಕೊಳ್ಳುವ ಜವಾಬ್ದಾರಿ ನೀಡಲಾಗಿದೆ.

ವಿವಿಧ ನ್ಯಾಯಾಲಯಗಳು ಈ ಇಬ್ಬರಿಗೆ ಶಿಕ್ಷೆ ವಿಧಿಸಿವೆ. ಸಿಧು ಒಂದು ವರ್ಷ, ದಲೇರ್‌ಗೆ ಎರಡು ವರ್ಷ ಶಿಕ್ಷೆ ಅನುಭವಿಸಲೇ ಬೇಕಿದೆ. ಈ ಪೈಕಿ 34 ವರ್ಷಗಳ ಹಿಂದಿನ ಬೀದಿ ಜಗಳ ಪ್ರಕರಣದಲ್ಲಿ ಸಿಧು ತಪ್ಪಿತಸ್ಥನಾಗಿದ್ದರೆ, ದಲೇರ್ ಮೆಹಂದಿ 18 ವರ್ಷ ಹಳೆಯ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!