ಯೂಟ್ಯೂಬ್‌ ನಿಂದ ಮರೆಯಾದ ಸಿಧು ಮೂಸೆ ವಾಲಾ ಕೊನೆಯ ಹಾಡು: ಕಾರಣ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಂಜಾಬಿನ ಸಿಧು ಮೂಸೆ ವಾಲಾ ಅವರ ಹತ್ಯೆಯ ಬಳಿಕ ಯೂಟ್ಯೂಬ್‌ ನಲ್ಲಿ ಬಿಡುಗಡೆಯಾದ ಅವರ ಕೊನೆಯ ಹಾಡಾದ ಸಟ್ಲೆಜ್-ಯಮುನಾ ಲಿಂಕ್ ಕಾಲುವೆಯನ್ನು ಉಲ್ಲೇಖಿಸುವ ಸಾಹಿತ್ಯ ಇದ್ದ ವಿಡಿಯೋವನ್ನುಇದೀಗ ತೆಗೆದುಹಾಕಲಾಗಿದೆ.
ಈ ಹಾಡು ಪಂಜಾಬ್‌ನ ನೀರಿನ ಸಮಸ್ಯೆಯ ಕುರಿತಾಗಿತ್ತು. ಸಟ್ಲೆಜ್-ಯಮುನಾ ಲಿಂಕ್ ಕಾಲುವೆಯ ಬಗ್ಗೆಉಲ್ಲೇಖಿಸಲಾಗಿತ್ತು.
ಜೂನ್ 23 ರಂದು ಯುಟ್ಯೂಬ್​ನಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ವಿಡಿಯೋ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ‘ಸರ್ಕಾರದಿಂದ ಕಾನೂನು ದೂರಿನ ಕಾರಣ ಈ ವಿಷಯವು ಈ ದೇಶದ ಡೊಮೇನ್‌ನಲ್ಲಿ ಲಭ್ಯವಿಲ್ಲ’ ಎಂದು ಹೇಳುವ ಸಂದೇಶವು ಇದೀಗ ಪ್ರದರ್ಶಿಸಲ್ಪಡುತ್ತದೆ. ಈ ಮೂಲಕ ವಿಡಿಯೋವನ್ನು ಯೂಟ್ಯೂಬ್‌ ನಿಂದ ತೆಗೆದಿರುವ ಕುರಿತು ತಿಳಿಯುತ್ತದೆ.
ಈ ಹಾಡಿನಲ್ಲಿ ನೀರಿನ ಸಮಸ್ಯೆ ಜೊತೆ ಅವಿಭಜಿತ ಪಂಜಾಬ್ 1984 ರ ಸಿಖ್ ವಿರೋಧಿ ದಂಗೆಗಳ ಬಗ್ಗೆಯೂ ಮಾಹಿತಿ ಇದೆ. ಈ ವಿಡಿಯೋದಲ್ಲಿ ರೈತ ಆಂದೋಲನದ ಸಮಯದಲ್ಲಿ ಕೆಂಪು ಕೋಟೆಯಲ್ಲಿ ಸಿಖ್ ಧ್ವಜವನ್ನು ಹಾರಿಸುವುದನ್ನು ಸಹ ತೋರಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!