ಸಿಧು ಮೂಸೆವಾಲ ಹತ್ಯೆ ಪ್ರಕರಣ : ಗೋಲ್ಡೀ ಬ್ರಾರ್‌ ಹಸ್ತಾಂತರಕ್ಕೆ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಂಜಾಬ್‌ ಗಾಯಕ ಮತ್ತು ಕಾಂಗ್ರೆಸ್‌ ಮುಖಂಡ ಸಿಧು ಮೂಸೆವಾಲಾ ಹತ್ಯೆಯ ಹೊಣೆ ಹೊತ್ತಿರುವ ಗೋಲ್ಡೀ ಬ್ರಾರ್‌ ನನ್ನು  ಗಡೀಪಾರು ಮಾಡುವಂತೆ ಕೆನಡಾ ದೇಶಕ್ಕೆ ಭಾರತವು ಔಪಚಾರಿಕವಾಗಿ ವಿನಂತಿಸಲಿದೆ ಎಂದು ಮೂಲಗಳು ವರದಿ ಮಾಡಿವೆ.

ಗೋಲ್ಡೀ ಬ್ರಾರ್‌ ವಿರುದ್ಧ ಇಂಟರ್‌ ಪೋಲ್‌ ರೆಡ್‌ ಕಾರ್ನರ್‌ ನೋಟೀಸ್‌ ಜಾರಿ ಮಾಡಿದ್ದು ಕೊಲೆ ಯತ್ನ, ಅಕ್ರಮ ಬಂದೂಕುಗಳ ಪೂರೈಕೆ, ಕ್ರಿಮಿನಲ್‌ ಪಿತೂರಿ ಮುಂತಾದ ಪ್ರಕರಣಗಳ ವಿರುದ್ಧ ಭಾರತದ ಕೋರಿಕೆಯಂತೆ ಆತನ ಮೇಲೆ ರೆಡ್‌ ನೋಟೀಸ್‌ ಜಾರಿ ಮಾಡಲಾಗಿದೆ ಎಂದಿದೆ. ರೆಡ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹುದೇ ಕಾನೂನು ಕ್ರಮ ಎದುರಿಸುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ವಿಶ್ವಾದ್ಯಂತ ಕಾನೂನು ಜಾರಿ ಮಾಡುವ ವಿನಂತಿಯಾಗಿದೆ.

“ರೆಡ್‌ ಕಾರ್ನರ್‌ ಸೂಚನೆಯಡಿಯಲ್ಲಿ ಆಪಾದಿತ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು, ಬಂಧಿಸುವುದು ಮತ್ತು ಹಸ್ತಾಂತರ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ದ್ವಿಪಕ್ಷೀಯವಾಗಿಯೂ ಹಾಗೆ ಮಾಡುವಂತೆ ಕೆನಡಾಕ್ಕೆ ನಾವು ವಿನಂತಿಸುತ್ತೇವೆ” ಎಂದು ಭಾರತೀಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ಗೋಲ್ಡೀ ಬ್ರಾರ್‌ ವಿರುದ್ಧ ಕೆನಡಾದಲ್ಲಿ ಯಾವುದೇ ಆರೋಪಗಳ ಸಾಬೀತಗಿಲ್ಲದಿರುವುದರಿಂದ ಹಸ್ತಾಂತರ ಪ್ರಕ್ರಿಯೆ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!