ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಋತುವಿನಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಓವನ್‌ರನ್ನು ಆಯ್ಕೆ ಮಾಡಿದೆ ಎಂದು ಐಪಿಎಲ್ ಸಮಿತಿಯು ಅಧಿಕೃತವಾಗಿ ಘೋಷಿಸಿದೆ.
ಇತ್ತೀಚಿನ ಅಭ್ಯಾಸದ ವೇಳೆ ಬೆರಳಿನ ಮೂಳೆ ಮುರಿತಕ್ಕೊಳಗಾದ ಮ್ಯಾಕ್ಸ್‌ವೆಲ್ ಉಳಿದ ಪಂದ್ಯಗಳಲ್ಲಿ ಆಡಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಸ್ತುತ, ಮಿಚೆಲ್ ಓವನ್ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2025ರಲ್ಲಿ ಪೇಶಾವರ್ ಝಲ್ಮಿ ತಂಡಕ್ಕಾಗಿ ಆಡುತ್ತಿದ್ದಾರೆ. 2024-25ರ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಋತುವಿನಲ್ಲಿ, ಹೋಬಾರ್ಟ್ ಹರಿಕೇನ್ಸ್ ತಂಡಕ್ಕಾಗಿ ಆಡಿದ ಓವನ್ 200 ಸ್ಟ್ರೈಕ್ ರೇಟ್‌ನಲ್ಲಿ 452 ರನ್ ಗಳಿಸಿ ಅತಿಹೆಚ್ಚು ರನ್ ಸ್ಕೋರರ್ ಆಗಿದ್ದರು.