ಕೆನಡಾದ ಪೆಟ್ರೋಲ್ ಬಂಕ್ ಹೊರಗೆ ಸಿಖ್ ಮಹಿಳೆಯ ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆನಡಾದ ಮಿಸ್ಸಿಸೌಗಾದ ಗ್ಯಾಸ್ ಸ್ಟೇಷನ್‌ನ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ 21 ವರ್ಷದ ಸಿಖ್ ಮಹಿಳೆ ಹತ್ಯೆಯಾಗಿದ್ದಾರೆ.
ಪ್ರಾದೇಶಿಕ ಪೊಲೀಸರು ಸಾವನ್ನಪ್ಪಿದ ಮಹಿಳೆಯನ್ನು ಪವನ್‌ಪ್ರೀತ್ ಕೌರ್ ಎಂದು ಗುರುತಿಸಿದ್ದು, ಆಕೆ ಗ್ಯಾಸ್ ಸ್ಟೇಷನ್‌ನ ಉದ್ಯೋಗಿ ಎಂಬುದನ್ನು ಗುರುತಿಸಿದರು.

ಇದೊಂದು ಉದ್ದೇಶಿತ ಘಟನೆ ಎಂದು ಭಾವಿಸಿರುವುದಾಗಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಸಾಕ್ಷಿಗಾಗಿ ಪ್ರದೇಶವನ್ನು ಕ್ಯಾನ್ವಾಸ್ ಮಾಡಿ ಸಾಕ್ಷಿಗಳನ್ನು ಸಂದರ್ಶಿಸಿದಾಗ ತಿಳಿದುಬಂದಿದ್ದು, ಶಂಕಿತನು ಗುಂಡಿನ ದಾಳಿಗೆ ಮೂರು ಗಂಟೆಗಳ ಮೊದಲು ಆ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಓಡಾಡಿದ್ದ ಎಂದು ಪೊಲೀಸರು ಕಂಡುಕೊಂಡರು. ಪ್ರಸ್ತುತ ಆರೋಪಿ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!