ಏರ್ ಶೋಗೆ ರೆಡಿಯಾಗುತ್ತಿದೆ ಸಿಲಿಕಾನ್ ಸಿಟಿ: ಇಲ್ಲಿದೆ ನಿಮಗೂ ನೋಡಲು ಅವಕಾಶ, ಟಿಕೆಟ್ ಬೆಲೆ ಪ್ರಕಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರು ಪ್ರತಿಷ್ಠಿತ ಏರೋ ಇಂಡಿಯಾ ಶೋಗೆ ಭರದ ಸಿದ್ಧತೆ ನಡೆಸುತ್ತಿದ್ದು,14ನೇ ಆವೃತ್ತಿ ಏರೋ ಇಂಡಿಯಾ ಶೋ ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ರ ವರೆಗೆ ನಡೆಯಲಿದೆ.

5 ದಿನಗಳ ಕಾಲ ನಡೆಯಲಿರುವ ಈ ಏರ್ ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ಏರೋ ಇಂಡಿಯಾ ಶೋ ಉದ್ಘಾಟನೆ ಮಾಡಲಿದ್ದಾರೆ. ರಕ್ಷಣಾ ಕ್ಷೇತ್ರ ಹಾಗೂ ಏರೋಸ್ಪೇಸ್ ಟ್ರೇಡಿಂಗ್ ಜೊತೆಗೆ ಪ್ರ ಲೋಹದ ಹಕ್ಕಿಗಳ ವೈಮಾನಿಕ ಪ್ರದರ್ಶನವೂ ನಡೆಯಲಿದೆ.

ಇನ್ನು ಈ ಪ್ರದರ್ಶನ ನೋಡಲು ಜನಸಾಮಾನ್ಯರಿಗೂ ಅವಕಾಶವಿದ್ದು, ಅದಕ್ಕಾಗಿ ಏರೋ ಇಂಡಿಯಾ ಶೋ ಟಿಕೆಟ್ ಬೆಲೆ ಪ್ರಕಟಗೊಂಡಿದೆ.

ಏರೋ ಇಂಡಿಯಾ ಟಿಕೆಟ್ ಬೆಲೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಏರ್ ಶೋವನ್ನು ಹಲವು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಏರ್ ಡಿಸ್‌ಪ್ಲೆ ಏರಿಯಾ(ADVA)ಟಿಕೆಟ್, ಸಾಮಾನ್ಯ ವೀಕ್ಷಕರ ಟಿಕೆಟ್, ಬ್ಯೂಸಿನೆಸ್ ಟಿಕೆಟ್ ಸೇರಿದಂತೆ ಕಲ ವಿಭಾಗದಲ್ಲಿ ವಿಂಗಡಿಸಲಾಗಿದೆ.
ADVA ಹಾಗೂ ಸಾಮಾನ್ಯರ ಟಿಕೆಟ್ ಒಂದೇ ದಿನಕ್ಕೆ ಅನ್ವಯವಾಗಲಿದೆ. 5 ದಿನ ವೀಕ್ಷಿಸಲು 5 ಟಿಕೆಟ್ ಪಡೆಯಬೇಕಾಗುತ್ತದೆ. ಒಂದು ದಿನಕ್ಕೆ ಒಂದು ಬಾರಿ ಮಾತ್ರ ಎಂಟ್ರಿ ಇರಲಿದೆ.

ADVA ಹಾಗೂ ಸಾಮಾನ್ಯರ ಟಿಕೆಟ್ ಬೆಲೆ ಒಬ್ಬ ವ್ಯಕ್ತಿಗೆ 2,500 ರೂಪಾಯಿ. ವಿದೇಶಿ ನಾಗರೀಕರಿಗೆ 50 ಅಮೆರಿಕನ್ ಡಾಲರ್. ADVA ಭಾರತೀಯ ಅತಿಥಿಗಳ ಟಿಕೆಟ್ ಬೆಲೆ 1,000 ರೂಪಾಯಿ. ವಿದೇಶಿ ಅತಿಥಿಗಳ ಬೆಲೆ 50 ಅಮೆರಿಕನ್ ಡಾಲರ್. ಇನ್ನು ಬ್ಯೂಸಿನೆಸ್ ವಿಸಿಟರ್ ಭಾರತೀಯರಿಗೆ 5,000 ರೂಪಾಯಿ ಹಾಗೂ ವಿದೇಶಿಗರಿಗೆ 150 ಅಮೆರಿಕನ್ ಡಾಲರ್. ಟಿಕೆಟ್ ಬೆಲೆ ಮೇಲೆ ಜಿಎಸ್‌ಟಿ ಅನ್ವಯವಾಗಲಿದೆ.

ಏರೋ ಇಂಡಿಯಾ 2023 ಕಾರ್ಯಕ್ರಮವನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಆಯೋಜನೆ ಮಾಡಲಿದೆ. 2018ರಿಂದಲೂ ಎಚ್‌ಎಎಲ್‌ ರಕ್ಷಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!