Sunday, March 7, 2021

Latest Posts

ಯಾವಾಗಲೂ ಕಾಯಿ ಚಟ್ನಿ ಮಾಡುವ ಬದಲು ದೊಡ್ಡಪತ್ರೆ ಚಟ್ನಿ ಮಾಡಿ… ಇಲ್ಲಿದೆ ಆರೋಗ್ಯಕರ ರೆಸಿಪಿ

ದೊಡ್ಡ ಪತ್ರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಿತ್ತ ಪ್ರಕೃತಿಯವರು ನಿತ್ಯ ಇದನ್ನು ಸೇವಿಸಿದರೆ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ. ಈ ಎಲೆಯನ್ನು ಹಾಗೇ ಸೇವಿಸುವುದು ಕಷ್ಟ. ಹಾಗಾಗಿ ಇದರ ಚಟ್ನಿ ಮಾಡಿಕೊಂಡು ಸೇವಿಸಿ. ಈ ಚಟ್ನಿ ದೋಸೆಗೂ ಸೈ, ಅನಕ್ಕೂ ಜೈ.. ಚಟ್ನಿ ಹೇಗೆ ಮಾಡುವುದು ಇಲ್ಲಿದೆ ನೋಡಿ…

ಬೇಕಾಗುವ ಸಾಮಗ್ರಿ:

ಸಾಂಬಾರ ಸೊಪ್ಪು
ಕಾಯಿ ತುರಿ
ಎಳ್ಳು
ಉಪ್ಪು
ಎಣ್ಣೆ
ಹುಣಸೆ ಹಣ್ಣು
ಹಸಿ ಮೆಣಸು
ಸಾಸಿವೆ
ಇಂಗು
ಈರುಳ್ಳಿ
ಲಿಂಬು

ಮಾಡುವ ವಿಧಾನ:

ಮೊದಲಿಗೆ ಎಣ್ಣೆಯಲ್ಲಿ ದೊಡ್ಡ ಪತ್ರೆ ಸೊಪ್ಪು, ಹಸಿಮೆಣಸು, ಎಳ್ಳು, ಕಾಳುಮೆಣಸನ್ನು ಚೆನ್ನಾಗಿ ಹುರಿದುಕೊಳ್ಳಿ.
ನಂತರ ಹುರಿದುಕೊಂಡಿರುವುದಕ್ಕೆ ಒಂದು ಕಪ್ ಕಾಯಿತುರಿ, ಹುಣಸೆಹಣ್ಣು, ಉಪ್ಪು ಹಾಕಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ. ನಂತರ ಲಿಂಬು ರಸ ಮತ್ತು ಚಿಕ್ಕದಾಗಿ ಹೆಚ್ಚಿಕೊಂಡ ಈರುಳ್ಳಿ ಹಾಕಿ ಮಿಕ್ಸ್ ಮಾಡಿದರೆ ದೊಡ್ಡ ಪತ್ರೆ ಚಟ್ನಿ ರೆಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss