ಎರಡು ಪದಾರ್ಥಗಳಿಂದ ಬಿಳಿ ಕೂದಲನ್ನು ಕಪ್ಪಾಗಿಸಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೀವನಶೈಲಿಯಲ್ಲಿನ ಬದಲಾವಣೆ, ಆಹಾರ ಪದ್ಧತಿ ಮತ್ತು ವಾಯು ಮಾಲಿನ್ಯದಿಂದಾಗಿ ಅನೇಕರಿಗೆ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ. ಎರಡರಿಂದ ಮೂರು ಬಿಳಿ ಕೂದಲಿನಿಂದ ಪ್ರಾರಂಭವಾಗಿ ಇಡೀ ತಲೆ ತುಂಬಾ ಬಿಳಿ ಕೂದಲು ತುಂಬುತ್ತದೆ. ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಮತ್ತು ಕ್ಯಾನ್ಸರ್ ಚಿಕಿತ್ಸೆಯಂತಹ ವಿವಿಧ ಅಂಶಗಳಿಂದ ಅನೇಕ ಜನ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಾರೆ.

ಈ ಸಮಸ್ಯೆ ಕೆಲವು ಬಾರಿ ಅನುವಂಶಿಕವಾಗಿರಬಹುದು. ಬಿಳಿ ಕೂದಲಿನಿಂದ ಬಳಲುತ್ತಿರುವವರು ಯಾವುದೇ ರಾಸಾಯನಿಕಗಳನ್ನು ಬಳಸದೆ ಕಡಿಮೆ ವೆಚ್ಚದಲ್ಲಿ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕೆ ತೆಂಗಿನೆಣ್ಣೆ ಮತ್ತು ಆಮ್ಲಾ ಪೌಡರ್ ಒಳ್ಳೆಯದು. ಅರ್ಧ ಕಪ್ ಎಣ್ಣೆಗೆ ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಮತ್ತು ಕಪ್ಪಾಗುವವರೆಗೆ ಸಣ್ಣ ಉರಿಯಲ್ಲಿ ಕುದಿಸಬೇಕು. ಮಿಶ್ರಣ ತಂಪಾದ ಮೇಲೆ ತಲೆಗೆ ಹಚ್ಚಿ ಸ್ನಾನ ಮಾಡಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಬಿಳಿ ಕೂದಲು ಮಾಯ.

ಅಷ್ಟೇ ಅಲ್ಲ ಇದು ತಲೆಯಲ್ಲಿನ ಹೊಟ್ಟನ್ನು ತಡೆಯುತ್ತದೆ. ಕೂದಲನ್ನು ಸಿಲ್ಕಿಯಾಗಿಸುತ್ತದೆ. ಹಾನಿಗೊಳಗಾದ ಕೂದಲಿನ ಪುನರುತ್ಪಾದನೆಯನ್ನು ಸುಧಾರಿಸುತ್ತದೆ. ಆಮ್ಲದಲ್ಲಿರುವ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಕೊಬ್ಬಿನಾಮ್ಲಗಳು ಕೂದಲಿಗೆ ಒಳ್ಳೆಯದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!