spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ನೀವು ಆಗಾಗ ಇ-ಮೇಲ್ ಬಳಸುತ್ತಿರಾ? ಹಾಗಿದ್ದರೆ Mail ಮಾಡುವಾಗ ಗಮನದಲ್ಲಿರಿಸಬೇಕಾದ ಅಂಶಗಳ ಲಿಸ್ಟ್ ಇಲ್ಲಿದೆ

ನಾವೆಲ್ಲರೂ ಈಗಿನ ಟೆಕ್ ಬದುಕಿಗೆ ಹೊಂದುಕೊಳ್ಳುತ್ತಿದ್ದೇವೆ. ಈ ನಡುವೆ ವಾಟ್ಸ್ ಆಪ್, ಫೇಸ್ ಬುಕ್ ನಂತೆ ಇ-ಮೇಲ್ ಕೂಡ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಆದರೆ ನಾವು mail ಮಾಡುವಾಗ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ನಿಮಗೂ ಸಮಸ್ಯೆಯಾಗುತ್ತದೆ. ಹಾಗಾಗಿ ಇ-ಮೇಲ್ ಮಾಡುವಾಗ ಗಮನದಲ್ಲಿರಿಸಬೇಕಾದ ಅಂಶಗಳ ಲಿಸ್ಟ್ ಇಲ್ಲಿದೆ..

  • ನಿಮಗೆ ಯಾರಾದರೂ mail ಕಳುಹಿಸಿದರೆ, ಅವರನ್ನು ಹೆಚ್ಚು ಹೊತ್ತು ಕಾಯಿಸಬೇಡಿ. ಬದಲಿಗೆ ನಿಮ್ಮ ಬಿಡುವಿನ ಸಮಯವನ್ನು ಅವರಿಗೆ ತಿಳಿಸಿ.
  • ಆದಷ್ಟು ಸುಲಭ ಪದಗಳನ್ನು ಬಳಸಿ ಇ-ಮೇಲ್ ಕಳುಹಿಸಿ. ಕಷ್ಟದ ಪದ ಬಳಕೆ ಮಾಡುವುದರಿಂದ ಬೇರೆಯವರಿಗೆ ಅರ್ಥ ಮಾಡಿಕೊಳ್ಳಲು ತೊಂದರೆಯಾಗುತ್ತದೆ.
  • ಕೆಲವೊಮ್ಮೆ ನಿಮಗೆ ಅನೇಕ mailಗಳು ಬಂದಿರಬಹುದು ಆದರೆ ಎಲ್ಲದಕ್ಕೂ ಒಂದೇ ರೀತಿಯ ಹಾಗೂ ಒಂದೇ ಸಲ ರಿಪ್ಲೈ ಮಾಡೋಕೆ ಹೋಗಬೇಡಿ.
  • ಎಲ್ಲಾ ಪದಗಳನ್ನು Caps Lock ನಲ್ಲಿ ಬರೆಯಬೇಡಿ. ಬದಲಿಗೆ ಅಲ್ಲಿ ಸಿಗುವ Italic ಅಥವಾ color ಆಯ್ಕೆ ಮಾಡಿ ಬರೆಯಿರಿ.
  • ನೀವು ಕಳುಹಿಸುವ mail ಆದಷ್ಟು ಸಣ್ಣದಾಗಿ, ಚೊಕ್ಕವಾಗಿರಲಿ. ನೀವು ಲೇಖನದ ರೀತಿಯ mail ಕಳುಹಿಸಿದರೆ ಯಾರಿಗೂ ಓದುವ ಮನಸಾಗೋದಿಲ್ಲ. ಬದಲಿಗೆ ಬುಲೆಟ್ ಪಾಯಿಂಟ್ಸ್ ರೀತಿಯೂ ಬರೆಯಬಹುದು.
  • ವಿಷಯ ವಿಭಾಗವನ್ನು ಎಂದಿಗೂ ಮಿಸ್ ಮಾಡದೇ ಬರೆಯಿರಿ. ಇದರಿಂದ ಆಸಕ್ತರು ನಿಮ್ಮ mailಓದಲು ಇಚ್ಛಿಸುವವರು ಓಪನ್ ಮಾಡುತ್ತಾರೆ.
  • Mail ನಲ್ಲಿ ಯಾವುದೇ ಗೌಪ್ಯ ಮಾಹಿತಿಯನ್ನು ಕಳುಹಿಸಬೇಡಿ. Mail ಗಳನ್ನು ಸುಲಭವಾಗಿ ಫಾರ್ವರ್ಡ್ ಮಾಡುವ ಸಾಮರ್ಥ್ಯ ಇದ್ದು, ಯಾರಾದರೂ ಬೇರೆ ವ್ಯಕ್ತಿಗೆ ಈ ಮಾಹಿತಿಗಳು ರವಾನೆಯಾಗಬಹುದು.
  • ನಿಮ್ಮ ವೃತ್ತಿ ಜೀವನದಲ್ಲಿ ಆದಷ್ಟು ಭಾವನಾತ್ಮಕ ವಿಷಯಗಳನ್ನು ಹಾಗೂ mail ನಲ್ಲಿ emoji ಗಳನ್ನು ಬಳಸುವುದು ಸೂಕ್ತವಲ್ಲ.
- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap