Wednesday, August 17, 2022

Latest Posts

ನ.5 ರಿಂದ ಓಂಕಾರೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮ

ಹೊಸ ದಿಗಂತ ವರದಿ, ಮಡಿಕೇರಿ:

ಇತಿಹಾಸ ಪ್ರಸಿದ್ಧ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನ.5ರಿಂದ ಡಿ.9 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಕೃಷ್ಣಪ್ಪ ಅವರು ತಿಳಿಸಿದ್ದಾರೆ.
ನ. 5 ರಂದು ತುಳಸಿ ಪೂಜೆ ಆರಂಭಗೊಳ್ಳಲಿದ್ದು, ನ.16 ರಂದು ಉತ್ಥಾನ ದ್ವಾದಶಿ-ತುಳಸಿ ಪೂಜೆ ಮುಕ್ತಾಯವಾಗಲಿದೆ. ನ.19 ರಂದು ಹುಣ್ಣಿಮೆ ತೆಪ್ಪೋತ್ಸವ ನಡೆಯಲಿದ್ದು, ನ.20 ರಂದು ಹುತ್ತರಿ ಹಬ್ಬ, ಡಿ.9 ರಂದು ಸುಬ್ರಹ್ಮಣ್ಯ ಷಷ್ಠಿ-ತೆಪ್ಪೋತ್ಸವ ಜರುಗಲಿದೆ ಎಂದು ಅವರು ಹೇಳಿದ್ದಾರೆ.
ಆಯಾಯ ದಿನಗಳಂದು ನಡೆಯಲಿರುವ ಪೂಜಾ ದಿನಗಳಲ್ಲಿ ಸಾರ್ವಜನಿಕ ಭಕ್ತಾದಿಗಳು ದೇಣಿಗೆಯನ್ನು ನೀಡಲಿಚ್ಚಿಸುವವರು ಹಾಗೂ ಪೂಜಾ ಸಮಯದಲ್ಲಿ ತಗಲುವ ವೆಚ್ಚಗಳನ್ನು ಭರಿಸುವ ದಾನಿಗಳು ಸ್ವಇಚ್ಛೆಯಿಂದ ಭಕ್ತಿಪೂರ್ವಕವಾಗಿ ಮುಂದೆ ಬಂದಲ್ಲಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ (ಮೊಬೈಲ್ 9980724222) ಅಥವಾ ಗುಮಾಸ್ತರಾದ ಅಣ್ಣಪ್ಪ (ಮೊಬೈಲ್ : 9063090339 ಮತ್ತು 9902290302) ನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿ ತಮ್ಮ ಹೆಸರನ್ನು ಕಾರ್ಯಕ್ರಮದ ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ ಅವರು ಕೋರಿದ್ದಾರೆ.
ಬಿದಿರಿನ ಬುಟ್ಟಿ‌ ಲಭ್ಯ: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ, ತಲಕಾವೇರಿಯ ಶ್ರೀ ತಲಕಾವೇರಿ ದೇವಾಲಯ ಹಾಗೂ ನಗರದ ಶ್ರೀ ಓಂಕಾರೇಶ್ವರ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಹಣ್ಣುಕಾಯಿ ಸೇವೆಗೆ ಅನುಕೂಲವಾಗುವಂತೆ ಬಿದಿರಿನ ಬುಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಬಿ.ಎಂ.ಕೃಷ್ಣಪ್ಪ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!