ಹೊಸದಿಗಂತ ವರದಿ, ವಿಜಯಪುರ:
ತೀವ್ರ ತುರುಸಿನ ಜಿದ್ದಾಜಿದ್ದಿ ಕಣವಾಗಿ ಪರಿಣಮಿಸಿದ ಸಿಂದಗಿ ಉಪ ಚುನಾವಣೆಗೆ ಮತದಾನ ಪ್ರಕ್ರಿಯಿ ಮಂದಗತಿಯಲ್ಲಿ ಆರಂಭಗೊಂಡಿದೆ.
ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಬೆಳಗ್ಗೆ 9 ಗಂಟೆವರೆಗೆ ಶೇ.8.08 ರಷ್ಟು ಮತದಾನವಾಗಿದೆ.
ಸಿಂದಗಿ ಪಟ್ಟಣದ ಶಾಲೆ ನಂ. 1 ರಲ್ಲಿ ಪಿಂಕ್ ಬೂತ್ ನಿರ್ಮಾಣ ಮಾಡಲಾಗಿದ್ದು, ಬೆಳಗ್ಗೆಯಿಂದ ಬೆರಳೆಣಿಕೆಯಷ್ಟು ಮತದಾರರು ಆಗಮಿಸಿ ಮತ ಚಲಾಯಿಸಿರುವುದು ಕಂಡು ಬಂತು.