ಹೊಸದಿಗಂತ ವರದಿ, ವಿಜಯಪುರ:
ಜಿಲ್ಲೆಯ ಆಲಮೇಲ ಪೊಲೀಸ್ ಠಾಣಾ ಆವರಣದಲ್ಲಿ ಭೀಮಾತೀರದ ರೌಡಿಶೀಟರ್ ಗಳಿಗೆ, ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಸೋಮವಾರ ಪರೇಡ್ ನಡೆಸಲಾಯಿತು.
ಸಿಂದಗಿ ಉಪ ಚುನಾವಣೆಯಲ್ಲಿ ತೊಂದರೆಕೊಡದಂತೆ ರೌಡಿಶೀಟರ್ ಗಳಿಗೆ ಡಿವೈಎಸ್ ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾರಾದರು ಪರವಾನಗಿ ಇಲ್ಲದೆ ಗನ್ ಬಳಸುತ್ತಿದ್ದರೆ ಮರಳಿಸುವಂತೆ ಎಚ್ಚರಿಕೆ ನೀಡಿದರು.