spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಂದಗಿ ಉಪ ಚುನಾವಣೆ: ಅಂತಿಮ ಕಣದಲ್ಲಿ 6 ಜನ ಅಭ್ಯರ್ಥಿಗಳು

- Advertisement -Nitte

ಹೊಸ ದಿಗಂತ ವರದಿ, ವಿಜಯಪುರ:

ಸಿಂದಗಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 6 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ರಾಹುಲ್ ಸಿಂಧೆ ಹೇಳಿದ್ದಾರೆ.
ಅಶೋಕ ಮಲ್ಲಪ್ಪ ಮನಗೂಳಿ (ಕಾಂಗ್ರೆಸ್), ನಾಜೀಯಾ ಶಕೀಲ್ ಅಂಗಡಿ (ಜೆಡಿಎಸ್), ರಮೇಶ ಬಾಳಪ್ಪ ಭೂಸನೂರ (ಬಿಜೆಪಿ), ಡಾ. ಸುನೀಲಕುಮಾರ ಸಂಗಪ್ಪ ಹೆಬ್ಬಿ (ಕರ್ನಾಟಕ ರಾಷ್ಟ್ರ ಸಮಿತಿ), ಜೀಲಾನಿ ಗುಡುಸಾಬ್ ಮುಲ್ಲಾ (ಪಕ್ಷೇತರ), ದೀಪಿಕಾ ಎಸ್. ಪಡಸಲಗಿ (ಪಕ್ಷೇತರ) ಅವರು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಹಿಂದಕ್ಕೆ ಪಡೆಯಲು ಅ.13, 2021 ರಂದು ಕೊನೆಯ ದಿನಾಂಕವಾಗಿತ್ತು. ಈ ಹಿನ್ನೆಲೆ ಇಂದು ರಾಷ್ಟ್ರೀಯ ಸಮಾಜ ಪಕ್ಷದ ವಿಕ್ರಮ ರಮೇಶ ಪಂಡಿತ ಹಾಗೂ ಪಕ್ಷೇತರ ಅಭ್ಯರ್ಥಿಯಾದ ದುಂಡಸಿ ಅಬ್ದುಲ್ ರಹಿಮಾನ್ ಮಹಮ್ಮದ್ ಹನೀಫ್ ಅವರು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದು, ಸಿಂದಗಿ ಉಪಚುನಾವಣೆಯ ಅಂತಿಮ ಚುನಾವಣಾ ಕಣದಲ್ಲಿ ಒಟ್ಟು ಆರು ಅಭ್ಯರ್ಥಿಗಳು ಉಳಿದಿದ್ದಾರೆ.
ಚುನಾವಣೆಯು ಅ. 30, 2021 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7-00 ಗಂಟೆಯವರೆಗೆ ನಡೆಯಲಿದ್ದು, ಮತ ಎಣಿಕೆಯು ನ.2, 2021 ರಂದು ಬೆಳಗ್ಗೆ 8 ಗಂಟೆಯಿಂದ ಜಿಲ್ಲಾ ಕೇಂದ್ರಸ್ಥಾನದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss