Tuesday, March 21, 2023

Latest Posts

ಲೈವ್ ಕನ್ಸರ್ಟ್ ವೇಳೆ ಗಾಯಕ ಬೆನ್ನಿ ದಯಾಳ್ ತಲೆಗೆ ಬಡಿದ ಡ್ರೋಣ್: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಚೆನ್ನೈನಲ್ಲಿ ನಡೆದ ಲೈವ್ ಕನ್ಸರ್ಟ್ ವೇಳೆ ಬಾಲಿವುಡ್ ಗಾಯಕ ಬೆನ್ನಿ ದಯಾಳ್ ಅವರ ತಲೆಗೆ ಡ್ರೋಣ್ ಬಡಿದು ಗಾಯಗೊಂಡಿದ್ದಾರೆ.
ಅವರು ವೇದಿಕೆಯಲ್ಲಿ ಹಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದು ಡ್ರೋಣ್ ತಲೆಗೆ ಬಡಿದಿದೆ. ಬೆನ್ನಿ ಅಲ್ಲೆ ಕುಸಿದು ಕುಳಿತ್ತಿದ್ದಾರೆ.

ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾಂಸ್ಕೃತಿಕ ಉತ್ಸವದಲ್ಲಿ ಬೆನ್ನಿ ದಯಾಳ್ ಪ್ರದರ್ಶನ ನೀಡುತ್ತಿದ್ದರು. ಆಗ ಘಟನೆ ಸಂಭವಿಸಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೇದಿಕೆಯಲ್ಲಿ ‘ಊರ್ವಶಿ ಊರ್ವಶಿ….’ ಹಾಡಿಗೆ ಪ್ರದರ್ಶನ ನೀಡುತ್ತಿದ್ದ ಬಿನ್ನಿ ಈ ವೇಳೆ ಡ್ರೋನ್ ಅವರ ಬಳಿಗೆ ಬರುತ್ತದೆ ಮತ್ತು ಅವನು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಿದ್ದಂತೆ ಡ್ರೋನ್ ಅವರ ತಲೆಯ ಹಿಂಭಾಗಕ್ಕೆ ಬಡಿಯಿತು. ಅಲೇಲ ಕುಸಿದು ಕುಳಿತ ಗಾಯಕನ ನೆರವಿಗೆ ಮ್ಯಾನೇಜ್‌ಮೆಂಟ್ ಓಡಿ ಬಂತು. ದಯಾಳ್ ತನ್ನ ತಲೆಯನ್ನು ಎರಡೂ ಕೈಗಳಿಂದ ಹಿಡಿದುಕೊಂಡು ವೇದಿಕೆಯಲ್ಲಿ ಕುಳಿತು ಬಿಟ್ಟರು. ಬೆನ್ನಿ ಅವರ ಕೈಗಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಬಳಿಕ ಬೆನ್ನಿ ದಯಾಳ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಬೆನ್ನಿ ನೇರ ಪ್ರದರ್ಶನದ ಸಮಯದಲ್ಲಿ ಕಲಾವಿದರ ಸುರಕ್ಷತೆಯಿಂದ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ‘ಡ್ರೋಣ್ ಅಭಿಮಾನಿಗಳು ತನ್ನ ತಲೆಯ ಹಿಂಭಾಗಕ್ಕೆ ಹೊಡೆದರು. ನನ್ನ ಎರಡು ಬೆರಳುಗಳು ಸಂಪೂರ್ಣವಾಗಿ ಗಾಯಗೊಂಡಿದೆ. ಆದರೂ ನಾನು ಚೆನ್ನಾಗಿಯೇ ಇದ್ದೀನಿ. ಬೇಗ ಚೇತರಿಸಿಕೊಳ್ಳುತ್ತಿದ್ದೀನಿ. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಕಲಾವಿದರ ಹತ್ತಿರದಲ್ಲಿ ಟ್ರೋಣ್ ಬಿಡಬಾರದು, ಡ್ರೋಣ್ ಬಗ್ಗೆ ಗೊತ್ತಿರುವವರಗೆ ಮಾತ್ರ ಡ್ರೋಣ್ ಬಳಸಲು ಅನುಮತಿ ನೀಡಬೇಕು, ಡ್ರೋಣ್ ಬಗ್ಗೆ ಸರಿಯಾಗಿ ತಿಳಿದುಕೊಂಡ ಎಕ್ಸ್‌ಪರ್ಟ್‌ಗಳನ್ನು ಮಾತ್ರ ಆಯೋಜಿಸಿ ಇಲ್ಲವೆಂದರೆ ಇದು ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!