Friday, July 1, 2022

Latest Posts

ಸರ್ ಇವನು ನನ್ನ ಪೆನ್ಸಿಲ್​ ಕದ್ದಿದ್ದಾನೆ, ಕೇಸ್ ಹಾಕಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಬಾಲಕ! ವಿಡಿಯೋ ವೈರಲ್….

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರದ ಕರ್ನೂಲ್‌ನಲ್ಲಿ ಒಂದು ಇಂಟ್ರೆಸ್ಟಿಂಗ್ ವಿಚಾರ ನಡೆದಿದೆ. ಹೌದು, ಪೊಲೀಸರೆಂದರೆ ಭಯ ಸಾಮಾನ್ಯ. ಏನೇ ನಡೆದರೂ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರದೆ ಸುಮ್ಮನಾಗಿ ಬಿಡುತ್ತಾರೆ. ಆದರೆ ಇಲ್ಲಿ ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಿಜ. ಇಲ್ಲಿ ಪೆನ್ಸಿಲ್​ ಕದ್ದಿದ್ದಕ್ಕಾಗಿ 3ನೇ ತರಗತಿ ಬಾಲಕನೋರ್ವ ಶಿಕ್ಷಕರಿಗೆ ಹೇಳದೆ, ತನ್ನ ಸ್ನೇಹಿತನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಠಾಣೆಯಲ್ಲಿ ಇಬ್ಬರು ಮಕ್ಕಳ ನಡುವಿನ ಸಂಭಾಷಣೆಯ ವಿಡಿಯೋ ತುಣುಕನ್ನು ಆಂಧ್ರಪ್ರದೇಶ ಪೊಲೀಸರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸರ ಬಳಿ ಬಂದ ಬಾಲಕರು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಈ ವೇಳೆ ಒಬ್ಬ, ಪ್ರತಿ ದಿನ ತಾನು ತೆಗೆದುಕೊಂಡು ಬರುವ ಪೆನ್ಸಿಲ್ ಅನ್ನು ಗೆಳೆಯ ಕಳ್ಳತನ ಮಾಡುತ್ತಿದ್ದಾನೆಂದು ದೂರಿದ್ದಾನೆ. ಇದಕ್ಕೆ ಆರೋಪಿ ಸ್ಥಾನದಲ್ಲಿರುವ ಬಾಲಕ, ತಾನು ಪೆನ್ಸಿಲ್‌ ಕದ್ದಿಲ್ಲ ಎಂದು ಹೇಳಿದ್ದಾನೆ.
ಹೀಗೆ, ಇಬ್ಬರ ಮಾತು ಕೇಳಿರುವ ಪೊಲೀಸರು ಕೊನೆಗೆ ರಾಜಿ ಮಾಡಿಸಿದರು. ಇನ್ಮುಂದೆ ಈ ರೀತಿಯಾಗಿ ನಡೆದುಕೊಳ್ಳದಂತೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.
ಈ ವಿಡಿಯೋ ತುಣುಕು ಶೇರ್‌ ಮಾಡಿರುವ ಪೊಲೀಸರು ಶಾಲಾ ಮಕ್ಕಳು ಕೂಡ ಆಂಧ್ರಪ್ರದೇಶ ಪೊಲೀಸರ ಮೇಲೆ ನಂಬಿಕೆ ಇಡ್ತಾರೆ ಎಂಬುದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆ ಬೇಕಿಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss