ಸರ್.. ನಾನು ಚೆನ್ನಾಗಿ ಕಾಣುತ್ತೇನೆ, ಆದರೂ ಚಲನ್ ಪಾವತಿಸುತ್ತೇನೆ: ವೈರಲ್ ಆಯಿತು ಪೊಲೀಸ್ -ಬೈಕ್ ಸವಾರನ ಮಾತುಕತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹೆಲ್ಮೆಟ್‌ ಕಡ್ಡಾಯ ಮಾಡಿದ್ದರೂ ಧರಿಸದೇ ಅಸಡ್ಡೆ ತೋರಿಸುತ್ತಿರುವುದು ನಾವು ನಿತ್ಯವೂ ಕಾಣುವ ವಿಚಾರ. ಪ್ರಾಣವನ್ನು ಕಾಪಾಡಿಕೊಳ್ಳಲು ಹೆಲ್ಮೆಟ್​ ಹೇಗೆ ಮುಖ್ಯ ಎಂಬ ಬಗ್ಗೆ ಪೊಲೀಸ್​ ಇಲಾಖೆ ಅಗಾಗ್ಗೆ ಗಮನ ಸೆಳೆಯುತ್ತಿದ್ದರೂ,ಯಾರು ಕ್ಯಾರೆ ಮಾಡಲ್ಲ.

ಇದೀಗ ಈ ಕುರಿತ ಟ್ವಿಟರ್​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರಾಫಿಕ್ ಸಿಗ್ನಲ್‌ನಲ್ಲಿ ಹೆಲ್ಮೆಟ್​ ಇಲ್ಲದೇ ನಿಂತಿರುವ ಫೋಟೋಗಳನ್ನು ಪೊಲೀಸ್​ ಇಲಾಖೆ ಶೇರ್​ ಮಾಡಿದೆ. ಪ್ರತಿ ಕ್ರಾಸಿಂಗ್‌ನಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿದ ಚಿತ್ರವು ಹೆಲ್ಮೆಟ್ ಇಲ್ಲದ ಬೈಕ್‌ ಸವಾರನನ್ನು ತೋರಿಸುತ್ತಿದ್ದು, ಇದನ್ನು ಹಲವರು ಟ್ವಿಟರ್​ನಲ್ಲಿ ತಮಾಷೆಯಾಗಿ ತೆಗೆದುಕೊಂಡಿದ್ದರೆ, ತಮ್ಮ ಫೋಟೋ ನೋಡಿ ಹಲವರು ಕಂಗಾಲಾಗಿದ್ದಾರೆ.

ಇನ್ನು ಒಬ್ಬ ಚಾಲಕ ಹೆಲ್ಮೆಟ್​ ಇಲ್ಲದೇ ಇರುವ ತನ್ನ ಫೋಟೋ ನೋಡಿ ‘ಧನ್ಯವಾದಗಳು @PuneCityPolice. ನಾನು ಚೆನ್ನಾಗಿ ಕಾಣುತ್ತೇನೆ. ಆದರೂ ಚಲನ್ ಪಾವತಿಸುತ್ತೇನೆ’ ಎಂದು ಬರೆದುಕೊಂಡಿದ್ದಾನೆ.

ಅದಕ್ಕೆ ಪುಣೆ ಪೊಲೀಸರು ಪ್ರತಿಕ್ರಿಯೆ ನೀಡಿ’ಖಂಡಿತ. P.S: ಕಪ್ಪು ಹೆಲ್ಮೆಟ್ ಧರಿಸಿದರೆ ನಿಮ್ಮ ಸುಂದರವಾದ ಕಪ್ಪು ಜಾಕೆಟ್‌ಗೆ ಮ್ಯಾಚಿಂಗ್​ ಆಗುತ್ತದೆ, ಸೋ ಹೆಲ್ಮೆಟ್ ಧರಿಸಿ’ ಎಂದಿದ್ದಾರೆ.ಎಲ್ಲೆಡೆ ಈ ಮಾತುಕತೆ ವೈರಲ್ ಆಗಿದೆ.

ಅಲ್ಲದೇ ನಂತರದಲ್ಲಿ ಅವರು ಇನ್ನೊಂದು ಟ್ವಿಟ್ ಮಾಡಿದ್ದು, ಅದರಲ್ಲಿ ಅವರು ಚಲನ್ ಪಾವತಿಸಿದ ಫೋಟೋ ಪೋಸ್ಟ್ ಮಾಡಿ, ಪುಣೆ ನಗರ ಪೊಲೀಸರೇ ಚಲನ್ ಪಾವತಿಸಲಾಗಿದೆ. ಹಾಗೆಯೇ ನಾನು ನಿಮ್ಮ ಸಲಹೆಯಂತೆ ಹೊಸದಾದ ಚೆಂದದ ಕಪ್ಪು ಬಣ್ಣದ ಹೆಲ್ಮೆಟ್ ಕೊಂಡುಕೊಳ್ಳುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!