spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಸರ್. ಎಂ. ವಿಶ್ವೇಶ್ವರಯ್ಯನವರ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿ”

- Advertisement -Nitte

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಸರ್. ಎಂ.ವಿಶ್ವೇಶ್ವರಯ್ಯ ಅವರ ಬದುಕು ಬರಿ ಇಂಜಿನಿಯರ್‍ಗಳಿಗಲ್ಲದೆ ಪ್ರತಿಯೊಬ್ಬನಿಗೂ ಸ್ಪೂರ್ತಿ. ಅವರು ಕರ್ಮಯೋಗಿಯಂತೆ ತುಂಬು ಜೀವನ ನಡೆಸಿದ ಪ್ರಮಾಣಿಕ ವ್ಯಕ್ತಿ. ಅವರ ಜೀವನವೆ ಒಂದು ಯಶೋಗಾಥೆ ಎಂದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎಂ.ಆರ್.ರಾಜೇಶ್ ಹೇಳಿದರು.
ಇಂಜಿನಿಯರ್‍ಗಳ ಒಕ್ಕೂಟ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಅಂಗವಾಗಿ ಬುಧವಾರ ನಗರದ ಲೋಕೋಪಯೋಗಿ ಇಲಾಖೆ ಆವರಣದ ಸರ್.ಎಂ.ವಿಶ್ವೇಶ್ವರಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ತಮ್ಮ ಪೂರ್ಣ ಜೀವನವನ್ನು ಪ್ರಪಂಚದ ಉದ್ಧಾರಕ್ಕಾಗಿ ಅವರು ತ್ಯಾಗ ಮಾಡಿದ್ದಾರೆ. ಅವರ ಪ್ರಾಮಾಣಿಕತೆ, ಸಮಯ ಪ್ರಜ್ಞೆಯಿಂದ ಕಟ್ಟಿದ ಕನ್ನಂಬಾಡಿ ಕಟ್ಟೆಯಂತಹ ಯೋಜನೆ ಸೇರಿದಂತೆ ಅಣೆಕಟ್ಟುಗಳ ನಿರ್ಮಾಣದ ಶಾಶ್ವತ ಕೆಲಸ ಇನ್ನೂ ಕಣ್ಮುಂದಿದೆ. ಸರ್ಕಾರಿ ಕೆಲಸ ಮಾಡಬೇಕಾದರೆ ಮಾತ್ರ ಸರ್ಕಾರದ ಸವಲತ್ತು ಉಪಯೋಗಿಸಿ ಮಾದರಿ ಜೀವನ ನಡೆಸಿದವರು ವಿಶ್ವೇಶ್ವರಯ್ಯನವರು ಎಂದರು.
ನೀನು ರಸ್ತೆ ಗುಡಿಸುವ ಕೆಲಸ ಮಾಡಿದರೂ ಅದು ಪ್ರಪಂಚದಲ್ಲೇ ಸ್ವಚ್ಚವಾದ ರಸ್ತೆಯಾಗಿರಬೇಕು ಎಂದು ಹೇಳುತ್ತಿದ್ದಂತಹ ಮಹಾನ್ ಚೇತನದ ಜನ್ಮ ದಿನಾಚರಣೆಯನ್ನು ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತಿದೆ. ನಾವು ಮಾಡುವ ಕೆಲಸದ ಬಗ್ಗೆ ಯಾವರೀತಿ ಮನೋಧರ್ಮ ವಿರಬೇಕೆಂಬುದು ಅವರ ಮಾತಿನಿಂದಲೆ ಅರ್ಥವಾಗುತ್ತದೆ ಎಂದರು.
ಅದೃಷ್ಟವೆಂಬುದು ದೇವರು ನೀಡಿರುವ ನಿಷ್ಪ್ರಯೋಜವಾದ ಆಯುಧವಲ್ಲ. ಆ ವಿಧಿ ಎನ್ನುವುದು ಮನುಷ್ಯನಿಗೆ ನೀಡಿರುವ ಸಾಧನ. ನಾವು ಅದನ್ನು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ವಿಶ್ವೇಶ್ವರಯ್ಯನವರು ಎಂದು ತಿಳಿಸಿದರು.
ಇಂಜಿನಿಯರ್‍ಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಎಂ.ಶಿವಪ್ರಕಾಶ್ ಮಾತನಾಡಿ, ಸಾಕಷ್ಟು ಕುಡಿಯುವ ನೀರಿನ ಯೋಜನೆ ರೂಪಿಸುವ ಜೊತೆ ಹಲವು ಜಿಲ್ಲೆಯಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತಿದ್ದು ಇದನ್ನು ಹೇಗೆ ಬಳಸಬೇಕೆಂಬ ಮುಂದಾಲೋಚನೆ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದವರು ವಿಶ್ವೇಶ್ವರಯ್ಯನವರು ಎಂದರು.
ಕಬ್ಬಿಣದ ಕಾರ್ಖಾನೆ ತೆರೆದ ಧೀಮಂತ ವ್ಯಕ್ತಿ ಅವರದ್ದಾಗಿದ್ದಾರೆ. ಮೈಮುರಿದು ದುಡಿ, ಹೆಚ್ಚಾಗಿ ದುಡಿ, ಆ ನಿನ್ನ ದುಡಿಮೆಯಲಿ ಶ್ರಮ, ನಿಯಮವಿರಲಿ, ಗುರಿ, ದಕ್ಷತೆ ಇರಲಿ ಎಂದು ಸಾರಿದ ಮಹಾನ್ ಚೇತನ ಅವರು ಎಂದರು.
ಎಷ್ಟು ಯುಗಗಳು ಕಳೆದರೂ ಸರ್‍ಎಂವಿ, ಸರ್.ಸಿ.ವಿ. ರಾಮನ್, ರಾಷ್ಟ್ರಕವಿ ಕುವೆಂಪು ರವರುಗಳು ಮಾಡಿದ ಶಾಶ್ವತ ಕೆಲಸ, ಕಾರ್ಯಗಳನ್ನು ರಾಜ್ಯ ಮರೆಯುವಂತಿಲ್ಲ. ಇಂತಹ ರತ್ನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿವುದು ಪ್ರತಿಯೊಬ್ಬ ಇಂಜಿನಿಯರ್‍ಗಳ ಕರ್ತವ್ಯ ಎಂದು ಹೇಳಿದರು.
ನಗರದ ಹಿರೇಮಗಳೂರು ವೃತ್ತದಿಂದ ನಗರದ ಲೋಕೋಪಯೋಗಿ ಇಲಾಖೆ ವರೆಗಿನ ರಸ್ತೆ ಹಾಗೂ ಪಿಡಬ್ಲ್ಯೂಡಿ ಕಚೇರಿ ವೃತ್ತಕ್ಕೆ ಕರ್ಮಯೋಗಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ನವರ ಹೆಸರನ್ನು ನಾಮಕರಣ ಮಾಡಿದರೆ ಜಿಲ್ಲೆಯ ಘನತೆ ಹೆಚ್ಚುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ಇಂಜಿನಿಯರ್‍ಗಳ ಒಕ್ಕೂಟದ ಜಿಲ್ಲಾ ಘಟಕ ನಿರ್ಣಯಿಸಿದೆ ಎಂದರು.
ವಾಟರ್ ಸಪ್ಲೆ ಎಕ್ಸಿಕ್ಯೂಟೀವ್ ಇಂಜಿನಿಯರ್ ವಿನಾಯಕ್ ಹುಲ್ಲೂರ್, ಜಿಪಂ ಎಕ್ಸಿಕ್ಯೂಟೀವ್ ಇಂಜಿನಿಯರ್ ವಾಸುದೇವ್, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಗವಿರಂಗಪ್ಪ, ಇಂಜಿನಿಯರ್‍ಗಳಾದ ಮಲ್ಲಿಕಾರ್ಜುನ್, ಜಯಸಿಂಹ, ಮಂಜುನಾಥ್, ಕಾಮತ್, ಬಾಸ್ಕರ್ ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss