ಸರ್ ಒಂದು ವಾರ ಆಫೀಸ್ ಬರಲ್ಲ ಎಂದು ರಜೆ ಹಾಕಿ ಹೋದ ಉದ್ಯೋಗಿ: ಕಾರಣ ಕೇಳಿ ಬಾಸ್ ಕಂಗಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರೇಕಪ್‌ ನೋವಿನಿಂದ ಹೊರ ಬರುವುದು ಅಂದರೆ ಅಷ್ಟು ಸುಲಭದ ವಿಷಯವೇ ಅಲ್ಲ. ಕೆಲವರು ಈ ನೋವಿನಿಂದ ಹೊರ ಬರಲಾರದೆ ಖಿನ್ನತೆಗೆ ಜಾರಿದವರು, ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಇನ್ನೂ ಅನೇಕರು ಬ್ರೇಕಪ್‌ ನೋವಿನಿಂದ ಹೊರ ಬರಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ.

ಅದೇ ರೀತಿ ಇಲ್ಲೊಬ್ಬ ಬ್ರೇಕಪ್‌ ನೋವಿನಿಂದ ಹೊರಬರಲು ಕಂಪನಿ ಗೆ ಬರೋಬ್ಬರಿ 1 ವಾರದ ರಜೆಯನ್ನು ತೆಗೆದುಕೊಂಡಿದ್ದಾನೆ.

ಹೌದು, ಜೆನ್ ಝೆಡ್ ಕಂಪನಿಯ ಬಾಸ್ ಒಬ್ಬರು ತಾವು ಎದುರಿಸಿದ ವಿಚಿತ್ರ ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಉದ್ಯೋಗಿ ಏಕಾಏಕಿ 1 ವಾರ ರಜೆ ಎಂದು ಮೆಸೇಜ್ ಮಾಡಿ ನಾಪತ್ತೆಯಾಗಿದ್ದೇನೆ. ಮೊದಲೇ ಕೆಲಸದ ಒತ್ತಡ, ತಕ್ಕ ಸಮಯಕ್ಕೆ ಮುಗಿಸಬೇಕಾದ ಜವಾಬ್ದಾರಿ ನಡುವೆ ರಜೆ ವಿಚಾರ ಕೇಳಿ ಬಾಸ್ ಆಕ್ರೋಶಗೊಂಡಿದ್ದಾರೆ. ಆದರೆ ಉದ್ಯೋಗಿಯ ರಜೆ ಕಾರಣ ಕೇಳಿ ಬಾಸ್ ಕಂಗಾಲಾಗಿ ಹೋಗಿದ್ದಾರೆ.

ಜೆನ್ ಝೆಡ್ ಮ್ಯಾನೇಜರ್ ತನ್ನ ಟೀಂ ಸದಸ್ಯರೊಬ್ಬರು ನಾನು ಒಂದು ದಿನ ರಜೆ, ಬೈ ಎಂದು ನಾಲ್ಕೇ ಪದಗಳಲ್ಲಿ ರಜೆ ಕೇಳಿದ ಮಾಹಿತಿ ಹಂಚಿಕೊಂಡಿದ್ದರು. ಇದೇ ವಿಚಾರ ಸಾಮಾಜಿಕ ತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. 1 ವಾರ ರಜೆ ಹಾಕಿ ಹೋದ ಉದ್ಯೋಗಿಯ ಘಟನೆ ಕುರಿತು ವಿವರಿಸಿದ್ದಾರೆ.

Image

ಕೃಷ್ಣ ಮೋಹನ್‌ ಎಂಬವರು ಈ ಪೋಸ್ಟ್‌ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು , ನನ್ನ ತಂಡದ ಸದಸ್ಯರೊಬ್ಬರು ಏಕಾಏಕಿ 1 ವಾರ ರಜೆ ಎಂದು ಮೆಸೇಜ್ ಮಾಡಿದ್ದಾನೆ. ಪ್ರಾಜೆಕ್ಟ್ ಮುಗಿಸಬೇಕಾದ ತುರ್ತು ಸಂದರ್ಭದಲ್ಲೇ ಉದ್ಯೋಗಿ ಈ ರೀತಿ 1 ವಾರ ರಜೆ ಹಾಕಿದ್ದಾನೆ. ಆತನ ಕಾರಣ ಕೇಳಿ ಕೆಲ ದಿನಗಳ ಕಾಲ ರಜೆ ಮುಂದೂಡುವ ಪ್ರಯತ್ನ ಮಾಡಿದ್ದೆ. ಆದರೆ ಉದ್ಯೋಗಿ ಯಾವ ಸುಳಿವು ಬಿಡಲಿಲ್ಲ, ಸಂಪರ್ಕಕ್ಕೂ ಸಿಗಲಿಲ್ಲ. ಒಂದು ಮೆಸೇಜ್ ಮಾಡಿ ಉದ್ಯೋಗಿ ನಾಪತ್ತೆಯಾಗಿದ್ದೇನೆ. ಇತ್ತ ಪ್ರಾಜೆಕ್ಟ್ ಪೂರ್ಣಗೊಳಿಸಬೇಕಾದ ದೊಡ್ಡ ಸವಾಲು ಎದುರಾಗಿತ್ತು. ಉದ್ಯೋಗಿ 1 ವಾರ ರಜೆ ಹಾಕಿ ಪರ್ವತ ಪ್ರದೇಶಕ್ಕೆ ತೆರಳಿರುವ ಮಾಹಿತಿ ಸಿಕ್ಕಿತ್ತು. ಕಾರಣ ತಿಳಿದಾಗ ಅಚ್ಚರಿಯಾಗಿತ್ತು. ಕಾರಣ ಬ್ರೇಕ್ ಅಪ್‌ನಿಂದ ಹೊರಬರಲು 1 ವಾರ ರಜೆ ಪಡೆದು ಪರ್ವತ ಪ್ರದೇಶಕ್ಕೆ ತೆರಳಿದ್ದಾನೆ ಅನ್ನೋ ಮಾಹಿತಿ ತಿಳಿದು ನನಗೆ ಅಚ್ಚರಿಯಾಗಿತ್ತು ಎಂದು ಬಾಸ್ ಹೇಳಿದ್ದಾರೆ.

ಕೃಷ್ಣ ಮೋಹನ್ ಬಹಿರಂಗಪಡಿಸಿದ ಈ ರಜೆ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆಯಾಗುತ್ತಿದೆ. ಬ್ರೇಕ್ ಅಪ್ ಸೇರಿದಂತೆ ಮಾನಸಿಕವಾಗಿ ಕುಗ್ಗಿ ಹೋಗುವ ವಿಚಾರಗಳಿಗೆ ರಜೆ ಅತ್ಯವಶ್ಯಕ. ಆತನ ಮತ್ತೆ ಬದುಕಿನ ಸಹಜ ದಾರಿಗೆ ಬರಬೇಕಿದೆ. ಹೀಗಾಗಿ ಮ್ಯಾನೇಜರ್ ಈ ಕುರಿತು ಗಮನಹರಿಸಬೇಕು ಎಂದು ಹಲವರು ಸೂಚಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!