Saturday, August 13, 2022

Latest Posts

ಗಿನ್ನಿಸ್ ದಾಖಲೆ ಬರೆದ ವಿಶ್ವದ ಹಿರಿಯ ಅವಳಿ ಸೋದರಿಯರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬರೋಬ್ಬರಿ 107 ವರ್ಷ 300 ದಿನಗಳ ವಯಸ್ಸಿನ ಅವಳಿ ಸಹೋದರಿಯರು ಇದೀಗ ವಿಶ್ವದ ಅತ್ಯಂತ ಹಿರಿಯ ಅವಳಿ ಸಹೋದರಿಯರಾಗಿ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ.
ಜಪಾನ್ ಮೂಲದ ಉಮೆನೊ ಸುಮಿಯಮಾ ಮತ್ತು ಕೌಮೆ ಕೊಡಮಾ ಈಗ ವಿಶ್ವದ ಅತ್ಯಂತ ಹಿರಿಯ ಅವಳಿ ಸೋದರಿಯರಾಗಿದ್ದಾರೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಘೋಷಿಸಿದೆ.
1913ರಲ್ಲಿ ಜನನ:
ಈ ಸಹೋದರಿಯರು 1913 ನವೆಂಬರ್ 5ರಂದು ಪಶ್ಚಿಮ ಜಪಾನ್‌ನ ಶೋಡೋಶಿಮಾ ದ್ವೀಪದಲ್ಲಿ ಜನಿಸಿದವರು. 11 ಜನ ಒಡಹುಟ್ಟಿದವರಲ್ಲಿ ಈ ಅವಳಿಗಳು 3ನೇ ಹಾಗೂ 4ನೇ ಮಕ್ಕಳಾಗಿ ಹುಟ್ಟಿದರು.
80 ವರ್ಷಗಳ ವರೆಗೆ ತಮ್ಮ ಕುಟುಂಬದ ಜೊತೆಗಿದ್ದ ಈ ಸಹೋದರಿಯರು ಬಳಿಕ ಇಬ್ಬರು ಜೊತೆಯಾಗಿ ಜಪಾನಿನ ತೀರ್ಥಯಾತ್ರೆ ಮುಗಿಸಿದ್ದಾರೆ.
ದಾಖಲೆ: 107 ವರ್ಷಗಳು ಮತ್ತು 175 ದಿನಗಳ ವಯಸ್ಸಿನ ಕಿನ್ ನರಿಟಾ ಮತ್ತು ಜಿನ್ ಕಾನಿ ಅವರ ಗಿನ್ನಿಸ್ ದಾಖಲೆಯನ್ನು ಉಮೆನೊ ಹಾಗೂ ಕೌಮೆ ಸಹೋದರಿಯರು ಮುರಿದಿದ್ದಾರೆ.
ಜಪಾನ್‌ ವಿಶ್ವದಲ್ಲಿ ಅತ್ಯಂತ ಹೆಚ್ಚು ವಯಸ್ಸಾದ ಜನಸಂಖ್ಯೆ ಹೊಂದಿದೆ. ದೇಶದಲ್ಲಿ ಶೇ 29ರಷ್ಟು ಜನರು 65 ವರ್ಷಕ್ಕಿಂದ ಮೇಲ್ಪಟ್ಟವರಿದ್ದು, ಅವರಲ್ಲಿ ಶೇ.50ರಷ್ಟು ಮಂದಿ ಶತಾಯುಷಿಗಳಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss