ಹೊಸ ದಿಗಂತ ವರದಿ, ಕೃಷ್ಣರಾಜಪೇಟೆ:
ಪಟ್ಟಣದ ಟೌನ್ ಕ್ಲಬ್ ಮುಂಭಾಗದಲ್ಲಿರುವ ಸೈಫ್ ಚಿಕನ್ ಸೆಂಟರ್ನಲ್ಲಿ ಚಿಕನ್ ಖರೀದಿಸಲು ಬಂದಿದ್ದ ರಫೀ ಅವರ ಮೋಟಾರ್ ಬೈಕಿನ ಲೈಟಿನ ಡೂಮಿನಲ್ಲಿ ಅವತಿದ್ದ ಬಲ್ಲೂರಿ ಹಾವನ್ನು ಉರಗತಜ್ಞ ಸ್ನೇಕ್ ಮುನ್ನಾ ಚಾಕಚಕ್ಯತೆಯಿಂದ ಹಿಡಿದು ಜನಸಾಮಾನ್ಯರ ಆತಂಕವನ್ನು ದೂರಮಾಡಿದ ಘಟನೆಯು ಇಂದು ನಡೆದಿದೆ.
ಹೀರೋ ಹೋಂಡಾ ಸ್ಪೆಂಡರ್ ಮೋಟಾರ್ ಬೈಕಿನಲ್ಲಿ ಚಿಕನ್ ಖರೀದಿಸಲು ಬಂದಿದ್ದ ರಫಿ ಅವರ ಮೋಟಾರ್ ಬೈಕಿನ ಮೇಲೆ ಹಾವು ಹರಿದಾಡುತ್ತಿದ್ದುದನ್ನು ಗಮನಿಸಿದ ಸೈಫ್ ಚಿಕನ್ ಸೆಂಟರ್ ಮಾಲೀಕರಾದ ರಿಯಾಜ್ ಅಹಮದ್ ಉರಗ ತಜ್ಞ ಸ್ನೇಕ್ ಮುನ್ನಾ ಅವರಿಗೆ ಕರೆ ಮಾಡಿ ಹಾವನ್ನು ಹಿಡಿಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮುನ್ನಾ ಅಪರೂಪದ ಒಂದು ಮಾರುದ್ದದ ಬಲ್ಲೂರಿ ಹಾವನ್ನು ಚಾಕಚಕ್ಯತೆಯಿಂದ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ಕೊಂಡೊಯ್ದರು.