ಹಿರಿಯರು ಹೇಳುವುದು ಸುಳ್ಳಲ್ಲ…ಕಾಲಮೇಲೆ ಕಾಲು ಹಾಕಬೇಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂದೆಲ್ಲಾ ಹಿರಿಯರೆದುರು ಮಕ್ಕಳು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವಂತೆಯೇ ಇರಲಿಲ್ಲ. ಆದರೆ ಕಾಲ ಬದಲಾಗಿದೆ. ಇಂದು ಪ್ರತಿಯೊಬ್ಬರೂ ಹಿರಿ ಕಿರಿಯರೆನ್ನದೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾರೆ. ಈ ರೀತಿ ಕೂರುವುದು ವೈಜ್ಞಾನಿಕವಾಗಿಯೂ ಸರಿಯಲ್ಲವಂತೆ!. ಇದರಿಂದ ಅನೇಕ ಸಮಸ್ಯೆಗಲು ತಲೆದೋರುತ್ತದೆ ಎಂದು ಸಂಶೋದನೆ ತಿಳಿಸಿದೆ. ನಿಮಗೆಲ್ಲಾದರೂ ಈ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ..ಆರೋಗ್ಯದಿಂದಿರಿ…
ಕಾಲಿನಲ್ಲಿ ಹಲವಾರು ನರಗಳಿದ್ದು ಕಾಲ ಮೇಲೆ ಕಾಲು ಹಾಕಿ ಕೂರುವುದರಿಂದ ಹಿಡಿದುಕೊಳ್ಳುವ ಸಾಧ್ಯತೆ ಇದೆ ಎಂದು ಸಾಬೀತಾಗಿದೆ. ರಕ್ತ ಸಂಚಾರದಲ್ಲಿ ತೊಂದರೆಗಳುಂಟಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಈ ರೀತಿ ಕುಳಿತುಕೊಳ್ಳುವುದರಿಂದಾಗಿ ಪಾದಗಳಿಗೆ ಗಂಭೀರ ಹಾನಿಯಾಗುವುದು ಅನೇಕರಿಗೆ ಇನ್ನೂ ಗೊತ್ತಿಲ್ಲ. ಹೃದಯ ಸಮಸ್ಯೆಗಳಿಗೂ ಈ ಭಂಗಿ ಅಪಾಯಕಾರಿ ಎಂದು ಸಂಶೋಧನೆಗಳು ಬಹಿರಂಗ ಪಡಿಸಿವೆ. ಮೂರು ಗಂಟೆಗಳಿಗೂ ಅಧಿಕ ಕಾಲ ಈ ರೀತಿ ಕುಳಿತರೆ ಸೊಂಟ, ಕುತ್ತಿಗೆಗಳ ಸಮಸ್ಯೆ ತಲೆದೋರುತ್ತವೆ. ಬೆನ್ನು ಮೂಳೆಗಳಿಗೂ ಸಮಸ್ಯೆಗಳುಂಟಾಗುತ್ತವೆಯಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!